ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ವಿಚಾರಣೆ ಜವಾಬ್ದಾರಿಯನ್ನು ಸುಪ್ರೀಂ ಸಿಬಿಐಗೆ ವಹಿಸಿದೆ. ಇದಾದ್ಮೇಲೆ ಸುಶಾಂತ್ ಸಿಂಗ್ ತಂದೆ ಕೆಕೆ ಸಿಂಗ್ ಮಗನ ಆಸ್ತಿ ಮೇಲೆ ಹಕ್ಕು ಸಾಧಿಸಿದ್ದಾರೆ. ಕಾನೂನು ಪ್ರಕಾರ ನಾನು ಉತ್ತರಾಧಿಕಾರಿ ಎಂದು ಕೆಕೆ ಸಿಂಗ್ ಹೇಳಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ.
ಸುಶಾಂತ್ ಜೀವಂತವಿರುವಾಗ ಇಟ್ಟುಕೊಂಡಿದ್ದ ವಕೀಲರು, ಸಿಎ ಮತ್ತು ವೃತ್ತಿಪರರ ಸೇವಕರ ಸೇವೆ ಸುಶಾಂತ್ ಮರಣದ ನಂತ್ರ ಕೊನೆಗೊಂಡಿದೆ. ಈಗ ನನ್ನ ಒಪ್ಪಿಗೆಯಿಲ್ಲದೆ, ಯಾವುದೇ ವಕೀಲ, ಸಿಎ ಅಥವಾ ಇತರರಿಗೆ ಸುಶಾಂತ್ ಅವರ ಆಸ್ತಿಯನ್ನು ಪ್ರತಿನಿಧಿಸುವ ಹಕ್ಕು ಇರುವುದಿಲ್ಲ ಎಂದಿದ್ದಾರೆ.
ವರುಣ್ ಸಿಂಗ್ ಅವರನ್ನು ವಕೀಲರಾಗಿ ನೇಮಿಸಿಕೊಂಡಿದ್ದೇವೆ. ಹಿರಿಯ ವಕೀಲ ವಿಕಾಸ್ ಸಿಂಗ್ ಅವರು ನನ್ನ ಕುಟುಂಬವನ್ನು ಪ್ರತಿನಿಧಿಸುತ್ತಾರೆ. ಇವರನ್ನು ಬಿಟ್ಟು ಬೇರೆ ಯಾವುದೇ ವಕೀಲರಿಗೆ ನಮ್ಮ ಕುಟುಂಬದ ಬಗ್ಗೆ ಮಾತನಾಡುವ ಹಕ್ಕಿಲ್ಲವೆಂದು ಅವರು ಹೇಳಿದ್ದಾರೆ.