
ದೊಡ್ಡ ಪರದೆ ಮೇಲೆ ಸಿನಿಮಾ ನೋಡದೆ ಬೇಸರಗೊಂಡಿದ್ದ ಸಿನಿ ಪ್ರಿಯರಿಗೆ ಖುಷಿ ಸುದ್ದಿ ಈಗಾಗಲೇ ಸಿಕ್ಕಿದೆ. ನಾಳೆಯಿಂದ ಸಿನಿಮಾ ಹಾಲ್ ತೆರೆಯಲಿದೆ. ಅನೇಕರು ಸಿನಿಮಾ ವೀಕ್ಷಣೆಗೆ ಕಾದು ಕುಳಿತಿದ್ದಾರೆ. ಆದ್ರೆ ಕೊರೊನಾ ಭಯದಲ್ಲಿ ಸಿನಿಮಾ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಈ ಮಧ್ಯೆ ಪಿವಿಆರ್ ಗಳು ಕೊರೊನಾ ಹಿನ್ನಲೆಯಲ್ಲಿ ಎಚ್ಚರಿಕೆ ತೆಗೆದುಕೊಂಡಿವೆ. ಎಲ್ಲ ವ್ಯವಸ್ಥೆಯನ್ನು ಮಾಡಿದೆ. ನಾಳೆ ಸಿನಿಮಾ ಹಾಲ್ ತೆರೆಯುತ್ತಿದ್ದಂತೆ ಸಿಬ್ಬಂದಿ ಹಾಗೂ ಅವ್ರ ಕುಟುಂಬಸ್ಥರಿಗೆ ಉಚಿತವಾಗಿ ಸಿನಿಮಾ ವೀಕ್ಷಣೆಗೆ ಅವಕಾಶ ಸಿಗಲಿದೆ. ಭಾನುವಾರ ಕೊರೊನಾ ವಾರಿಯರ್ಸ್ ಗೆ ಸಿನಿಮಾ ಹಾಲ್ ಮೀಸಲಿಡಲಾಗುವುದು. ಅವರಿಗೂ ಉಚಿತವಾಗಿ ಟಿಕೆಟ್ ನೀಡಲಾಗುವುದು.
ಕೊರೊನಾ ಕಾರಣಕ್ಕೆ ಆಹಾರದ ಬಗ್ಗೆಯೂ ಸಾಕಷ್ಟು ಎಚ್ಚರಿಕೆ ತೆಗೆದುಕೊಳ್ಳಲಾಗಿದೆ. ಟಿಕೆಟ್ ಡಿಜಿಟಲ್ ಬುಕ್ಕಿಂಗ್ ನಡೆಯಲಿದೆ. ಒಂದೇ ಒಂದು ಟಿಕೆಟ್ ಕೌಂಟರ್ ತೆರೆಯಲಿದೆ. ಅಲ್ಲಿಯೂ ಸುರಕ್ಷತೆ ಬಗ್ಗೆ ಹೆಚ್ಚು ಮಹತ್ವ ನೀಡಲಾಗುವುದು. ಅಲ್ಲದೆ ಕೌಂಟರ್ ನಲ್ಲಿ ಪಿಪಿಇ ಕಿಟ್ ಕೂಡ ಲಭ್ಯವಿರಲಿದೆ. 30,50.100 ರೂಪಾಯಿಗೆ ಪಿಪಿಇ ಕಿಟ್ ಸಿಗಲಿದೆ.