ಭಾರತ ಹಾಗೂ ಚೀನಾ ಗಡಿ ಸಂಘರ್ಷದ ವಿಚಾರ ದೊಡ್ಡ ಮಟ್ಟದಲ್ಲಿ ಆಗುತ್ತಿರುವ ಬೆನ್ನಲ್ಲೇ ಇತ್ತ ಕಾಂಗ್ರೆಸ್ ಹಾಗೂ ಬಿಜೆಪಿ ಕೂಡ ವಾಗ್ವಾದಗಳನ್ನು ಮಾಡುತ್ತಿದೆ. ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ಚೀನಾ ಮೂಲದ ಕಂಪನಿ ಧನಸಹಾಯ ಮಾಡಿತ್ತು ಎಂಬ ವಿಚಾರ ಚರ್ಚೆಯಾಗುತ್ತಿದ್ದ ವೇಳೆ ಇದೀಗ ಬಿಜೆಪಿಗೆ ಕಾಂಗ್ರೆಸ್ ಟಾಂಗ್ ನೀಡಿದೆ.
ಪಿಎಂ ಕೇರ್ಸ್ ಗೆ ಚೀನಾ ಮೂಲದ ಕಂಪನಿಗಳು ದೇಣಿಗೆಯನ್ನು ನೀಡಿದ್ದಾವೆ ಎಂದು ಆರೋಪಿಸಿದ್ದಾರೆ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ. ನಿನ್ನೆ ಮನ್ ಕಿ ಬಾತ್‌ನಲ್ಲಿ ಮೋದಿ ಲಡಾಕ್ ವಿಚಾರ ಮಾತನಾಡಿ ನಮ್ಮ ಭೂಪಟದ ಮೇಲೆ ಕಣ್ಣಿಟ್ಟವರಿಗೆ ಸರಿಯಾಗಿ ಬುದ್ದಿ ಕಲಿಸಿದ್ದೇವೆ ಎಂದಿದ್ದರು. ಇದಾದ ನಂತರ ಸುದ್ದಿಗೋಷ್ಟಿ ನಡೆಸಿದ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ದೇಣಿಗೆ ವಿಚಾರ ಮಾತನಾಡಿದ್ದಾರೆ.
ಈ ರೀತಿಯಾಗಿ ಹಣ ಪಡೆಯುವ ಮೂಲಕ ಮೋದಿ ರಾಜಿ ಮಾಡಿಕೊಂಡಿದ್ದಾರೆ. ಇಂತವರು ದೇಶವನ್ನು ರಕ್ಷಿಸುತ್ತಾರಾ ಎಂದು ಪ್ರಶ್ನೆ ಮಾಡಿದ್ದಾರೆ. ಇದೇ ವೇಳೆ ಚೀನಾವನ್ನು ಆಕ್ರಮಣಕಾರಿ ಎಂದು ಘೋಷಣೆ ಮಾಡಿ ಎಂದು ಮೋದಿಗೆ ಮನು ಸಿಂಘ್ವಿ ಕೇಳಿದ್ದಾರೆ.