ಪ್ರಾಮಾಣಿಕ ತೆರಿಗೆದಾರರನ್ನು ಉತ್ತೇಜಿಸಲು ಮತ್ತು ತೆರಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೊಸ ವಿಶೇಷ ವೇದಿಕೆಯನ್ನು ಪ್ರಾರಂಭಿಸಿದ್ದಾರೆ. ವೇದಿಕೆಗೆ ‘ಪಾರದರ್ಶಕ ತೆರಿಗೆ: ಗೌರವವನ್ನು ಗೌರವಿಸುವುದು’ (ಟ್ರಾನ್ಸ್ಪರೆಂಟ್ ಟ್ಯಾಕ್ಸೇಷನ್ : ಹಾನರಿಂಗ್ ದಿ ಹಾನೆಸ್ಟ್) ಎಂದು ಹೆಸರಿಸಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಮೋದಿ ಪಾರದರ್ಶಕ ತೆರಿಗೆ ಬಗ್ಗೆ ಮಾತನಾಡಿದರು.
ಈ ವೇದಿಕೆಯು 21 ನೇ ಶತಮಾನದ ತೆರಿಗೆ ವ್ಯವಸ್ಥೆ ಪ್ರಾರಂಭವಾಗಿದೆ ಎಂದು ಮೋದಿ ಹೇಳಿದ್ದಾರೆ. ಇದು ಫೇಸ್ಲೆಸ್ ಮೌಲ್ಯಮಾಪನ ಮತ್ತ ತೆರಿಗೆದಾರರ ಚಾರ್ಟರ್ ನಂತಹ ಪ್ರಮುಖ ಸುಧಾರಣೆಗಳನ್ನು ಹೊಂದಿದೆ ಎಂದಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಮೋದಿ ತೆರಿಗೆ ಸಂಬಂಧಿತ ಪ್ರಕರಣಗಳ ತನಿಖೆ ಮತ್ತು ಮೇಲ್ಮನವಿ ಎರಡೂ ಫೇಸ್ಲೆಸ್ ಆಗಿರಲಿದೆ ಎಂದಿದ್ದಾರೆ.
ಇದ್ರ ಕೆಲ ನಿಯಮಗಳು ಈಗಾಗಲೇ ಜಾರಿಗೆ ಬಂದಿದೆ. ಸೆಪ್ಟೆಂಬರ್ 25 ರಿಂದ ಸಂಪೂರ್ಣ ನಿಯಮಗಳು ಜಾರಿಗೆ ಬರಲಿದೆ ಎಂದು ಪಿಎಂ ಮೋದಿ ಹೇಳಿದ್ದಾರೆ.
ಈಗ ಪ್ರಾಮಾಣಿಕರನ್ನು ಗೌರವಿಸಲಾಗುವುದು. ರಾಷ್ಟ್ರ ನಿರ್ಮಾಣದಲ್ಲಿ ಪ್ರಾಮಾಣಿಕ ತೆರಿಗೆದಾರರು ಮಹತ್ವದ ಪಾತ್ರ ವಹಿಸುತ್ತಾರೆ. ಇಂದಿನಿಂದ ಪ್ರಾರಂಭವಾಗುವ ಹೊಸ ವ್ಯವಸ್ಥೆಗಳು, ಹೊಸ ಸೌಲಭ್ಯಗಳು ಕನಿಷ್ಠ ಸರ್ಕಾರ-ಗರಿಷ್ಠ ಆಡಳಿತವನ್ನು ಮುನ್ನಡೆಸಲಿದೆ ಎಂದಿದ್ದಾರೆ. ಇದು ಸರ್ಕಾರದ ಹಸ್ತಕ್ಷೇಪವನ್ನು ಕಡಿಮೆ ಮಾಡುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.