ವಾಣಿಜ್ಯ ನಗರಿ ಮುಂಬೈನಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ. ಮುಂಬೈನ ಯಾವುದೇ ಪ್ರದೇಶದಲ್ಲಿ ಕರೆಂಟ್ ಇಲ್ಲ. ಟಾಟಾ ವಿದ್ಯುತ್ ಸರಬರಾಜಿನಲ್ಲಿ ಸಮಸ್ಯೆಯಾಗಿದ್ದು, ಇಡೀ ಮುಂಬೈ ಜನರ ದಿನನಿತ್ಯದ ಕೆಲಸಕ್ಕೆ ಅಡ್ಡಿಯಾಗಿದೆ.
ಪವರ್ ಗ್ರಿಡ್ ವೈಫಲ್ಯದಿಂದಾಗಿ ಈ ಸಮಸ್ಯೆ ಎದುರಾಗಿದೆ ಎನ್ನಲಾಗ್ತಿದೆ. ಥಾಣೆ, ಮುಂಬೈ, ಮುಂಬೈ ಉಪನಗರ ಮೂರು ಜಿಲ್ಲೆಗಳಲ್ಲಿ ವಿದ್ಯುತ್ ಇಲ್ಲ. ಈ ಬಗ್ಗೆ ಬೃಹತ್ ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ ಸಂಸ್ಥೆ ಟ್ವೀಟ್ ಮಾಡಿ ಮಾಹಿತಿ ನೀಡಿದೆ.
ಮುಂಬೈನ ಸ್ಥಳೀಯ ರೈಲು ಸೇವೆಗಳಿಗೆ ಅಡ್ಡಿಯಾಗಿದೆ ಎಂದು ಕೇಂದ್ರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಹೇಳಿದ್ದಾರೆ.
ಮುಂಬೈ 24 ಗಂಟೆಗಳ ವಿದ್ಯುತ್ ಗೆ ಹೆಸರುವಾಸಿಯಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಇಲ್ಲಿ ಈವರೆಗೂ ವಿದ್ಯುತ್ ವ್ಯತ್ಯಯವಾಗಿಲ್ಲ. ವಿದ್ಯುತ್ ವ್ಯತ್ಯಯದ ನಂತ್ರ ಜನರು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್, ಚರ್ಚೆ ಶುರು ಮಾಡಿದ್ದಾರೆ.