ಬಿಹಾರದ ಭಾಗಲ್ಪುರದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಪ್ರೇಮಿ ಜೊತೆ ಸೇರಿ ಮಹಿಳೆ ತನ್ನ ಪತಿಯ ಹತ್ಯೆ ಮಾಡಿದ್ದಾಳೆ. ಮಹಿಳೆಯ ಬಣ್ಣ ಬಳೆಯಿಂದ ಗೊತ್ತಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಗುರುವಾರ ನಂದಕಿಶೋರ್ ಹತ್ಯೆ ನಡೆದಿದೆ. ಹತ್ಯೆ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ಶುರು ಮಾಡಿದ್ದಾರೆ. ನಂದಕಿಶೋರ್ ಶವದ ಮುಂದೆ ಕುಳಿತು ಪತ್ನಿ ಅಳ್ತಿದ್ದಳು ಎನ್ನಲಾಗಿದೆ.
ಆಕೆ ಬಳೆ ಚೆಕ್ ಮಾಡುವಂತೆ ಪೊಲೀಸ್ ಅಧಿಕಾರಿ ಸೂಚನೆ ನೀಡಿದ್ದಾರೆ. ಆಗ ಬಳೆಗೆ ನಂದಕಿಶೋರ್ ರಕ್ತ ಬಡಿದಿರುವುದು ಕಂಡಿದೆ. ತಕ್ಷಣ ಪೊಲೀಸರು ಆಕೆ ಬಂಧಿಸಿ ವಿಚಾರಣೆ ಶುರು ಮಾಡಿದ್ದಾರೆ.