ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮೂರು ತಿಂಗಳ ಗರ್ಭಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇದ್ರಿಂದ ನೊಂದ ಪತಿ ಆಕೆ ಚಿತೆಗೆ ಹಾರಿದ್ದಾನೆ. ಆದ್ರೆ ಅಲ್ಲಿ ಸಾಯದ ಪತಿ ಮತ್ತೊಂದು ಮಾರ್ಗ ಹುಡುಕಿಕೊಂಡಿದ್ದಾನೆ.
ಪತಿ ಆರ್ ಟಿ ಒ ಕಚೇರಿ ವಾಹನದ ಚಾಲಕನಾಗಿದ್ದ. ಮಾರ್ಚ್ 19ರಂದು ಮದುವೆಯಾಗಿತ್ತು. ಪತ್ನಿ ಮೂರು ತಿಂಗಳ ಗರ್ಭಿಣಿಯಾಗಿದ್ದಳು. ಲಾಕ್ ಡೌನ್ ಸಂದರ್ಭದಲ್ಲಿ ಪತಿ ಜೊತೆಗಿದ್ದವಳು ಈಗ ನಾಲ್ಕು ದಿನಗಳ ಹಿಂದೆ ತವರಿಗೆ ಬಂದಿದ್ದಳು.
ನಿನ್ನೆ ಶೌಚಾಲಯಕ್ಕೆ ಹೋದವಳು ವಾಪಸ್ ಬಂದಿರಲಿಲ್ಲ. ಊರಿನ ಹೊರಗಿರುವ ಬಾವಿ ಬಳಿ ಆಕೆ ಬಟ್ಟೆ ಸಿಕ್ಕಿತ್ತು. ವಿಷಯ ತಿಳಿದು ಬಂದ ಪತಿ ಆಕೆ ಚಿತೆಗೆ ಹಾರಿದ್ದಾನೆ. ಆತನನ್ನು ರಕ್ಷಿಸಲಾಗಿದೆ. ಆದ್ರೆ ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾನೆ.