ಕೋಲ್ಕತ್ತಾದಲ್ಲಿ ಸಿನಿಮಾ ರೀತಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಪತ್ನಿಯ ಅಕ್ರಮ ಸಂಬಂಧ ಪತ್ತೆ ಹಚ್ಚಲು ಪತಿ ಮುಂದಾಗಿದ್ದಾನೆ. ಈ ವೇಳೆ ಪತಿಗೆ ಸಿಕ್ಕ ಮಾಹಿತಿ ದಂಗಾಗಿಸಿದೆ. ಒಂದಲ್ಲ ತನ್ನ ಪತ್ನಿಗೆ 14 ಬಾಯ್ ಫ್ರೆಂಡ್ಸ್ ಇದ್ದಾರೆಂಬುದು ಪತಿಗೆ ಗೊತ್ತಾಗಿದೆ.
ಪತ್ನಿಯ ಅಕ್ರಮ ಸಂಬಂಧ ಪತ್ತೆ ಹಚ್ಚಿದ ಪತಿ 14 ಪುರುಷರಿಗೂ ಲೀಗಲ್ ನೋಟಿಸ್ ಕಳುಹಿಸಿದ್ದಾನೆ. 14 ಪುರುಷರಿಂದ ಪರಿಹಾರವಾಗಿ ಪತಿ 100 ಕೋಟಿ ರೂಪಾಯಿ ಕೇಳಿದ್ದಾರೆ. 14 ಬಾಯ್ ಫ್ರೆಂಡ್ ಹೊಂದಿದ್ದ ಪತ್ನಿಯಿಂದ ವೈವಾಹಿಕ ಜೀವನವು ಛಿದ್ರಗೊಂಡಿದೆ ಎಂದು ಅವನು ಹೇಳಿದ್ದಾನೆ.
ಮಹಿಳೆಯ ಪತಿ ಕೋಲ್ಕತಾ ಮೂಲದ ಉದ್ಯಮಿ. ಕಾರು ಚಾಲಕನನ್ನು ಗೂಢಚಾರಿಯಾಗಿ ನೇಮಿಸಿಕೊಂಡು ಪತ್ನಿ ಅಕ್ರಮ ಸಂಬಂಧ ಪತ್ತೆ ಹಚ್ಚಿದ್ದ. ಎಲ್ಲರಿಗೂ ಪತ್ರ ಬರೆದಿರುವ ಪತಿ, ನೀವು ಸಂಬಂಧ ಹೊಂದಿರುವವಳು ನನ್ನ ಪತ್ನಿ. ಆಕೆ ಮದುವೆಯಾಗಿದ್ದಾಳೆ ಎಂಬುದು ನಿಮಗೆ ಗೊತ್ತು. ಆಕೆ ಜೊತೆ ದೈಹಿಕ ಸಂಬಂಧ ಬೆಳೆಸಿ ನನ್ನ ಸಂಸಾರ ಹಾಳು ಮಾಡಿದ್ದೀರಿ. ಹಾಗಾಗಿ 2 ವಾರದಲ್ಲಿ ಹಣ ನೀಡಬೇಕು. ಇಲ್ಲವಾದ್ರೆ ಕೋರ್ಟ್ ಮೊರೆ ಹೋಗುವುದಾಗಿ ಪತ್ರದಲ್ಲಿ ಹೇಳಿದ್ದಾನೆ.