ಹೈದರಾಬಾದ್: ಪಾಪಿ ಪತಿಯೊಬ್ಬ ತನ್ನ ಹೆಂಡತಿಯೊಂದಿಗಿನ ಖಾಸಗಿ ಫೋಟೋವನ್ನೇ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ಪತ್ನಿಯನ್ನೇ ಕಾಲ್ ಗರ್ಲ್ ಎಂದು ಪೋಸ್ಟ್ ಹಾಕಿರುವ ಘಟನೆ ಆಂದ್ರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ತಿರುಪತಿಯ ಎನ್ ಜಿಎಸ್ ಕಾಲೇಜಿನ ಜ್ಯೂನಿಯರ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಆರೋಪಿ, ತನ್ನ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ. ಪತಿ ಹಿಂಸೆಯಿಂದಲೇ ಗರ್ಭಪಾತ ಕೂಡ ಆಗಿತ್ತು ಎನ್ನಲಾಗಿದೆ. ಇತ್ತೀಚೆಗೆ ಪತಿಯ ಹಿಂಸೆ, ಮಾನಸಿಕ ಕಿರುಕುಳ ತಾಳಲಾರದೇ ಪತ್ನಿ ತವರು ಮನೆ ಸೇರಿದ್ದಳು.
ಪತ್ನಿ ತಾನು ಹೇಳಿದಂತೆ ವರದಕ್ಷಿಣೆ ಹಣ, ಚಿನ್ನ ತರದಿದ್ದಾಗ ಕೋಪಗೊಂಡ ಪತಿ ಮಹಾಶಯ ತನ್ನ ಪತ್ನಿ ಜೊತೆಗಿನ ಖಾಸಗಿ ಫೋಟೋಗಳನ್ನು ಕಾಲೇಜಿನ ವಾಟ್ಸಪ್ ಗ್ರೂಪ್ ಗೆ ಹರಿಬಿಟ್ಟು ಕಾಲ್ ಗರ್ಲ್ ಎಂದು ಬಿಂಬಿಸಿ ಗಂಟೆಗೆ 3000 ರೂ. ಎಂದು ಅಡಿಬರಹ ಬರೆದಿದ್ದಾನೆ. ಇದನ್ನು ಗಮನಿಸಿದ ಪತ್ನಿ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.