ಜಾರ್ಖಂಡ್‌ನ ನಿವೃತ್ತ ಡಿಜಿ ಪಿಕೆ ಡಿಕೆ ಪಾಂಡೆ ವಿರುದ್ಧ ಸೊಸೆ ವರದಕ್ಷಿಣೆ ಕಿರುಕುಳ ಸೇರಿದಂತೆ ಕೆಲ ಆರೋಪ ಮಾಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ. ನಿವೃತ್ತ ಡಿಜಿ ಸೊಸೆ ಪತಿ ಹಾಗೂ ಮಾವನ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ.
2016ರಲ್ಲಿ ಮದುವೆ ನಡೆದಿತ್ತು. ಮದುವೆಯಾದ ಎರಡನೇ ದಿನವೇ ಪತಿ ಸಲಿಂಗಕಾಮಿ ಎಂಬುದು ಪೀಡಿತೆಗೆ ಗೊತ್ತಾಗಿತ್ತಂತೆ. ಈ ಬಗ್ಗೆ ಮಾವ ಹಾಗೂ ಅತ್ತೆಗೆ ವಿಷ್ಯ ತಿಳಿಸಿದ್ದಾಳೆ. ಚಿಕಿತ್ಸೆ ನಂತ್ರ ಸರಿಯಾಗ್ತಾನೆಂದು ಅತ್ತೆ ಭರವಸೆ ನೀಡಿದ್ದಳಂತೆ. ಮೂರು ವರ್ಷವಾದ್ರೂ ಪತಿ ಸರಿಯಾಗಲಿಲ್ಲವಂತೆ.
ಈ ಮಧ್ಯೆ ಮದುವೆ ಸಮಾರಂಭವೊಂದರಲ್ಲಿ ಮಾವ, ಸೊಸೆ ಜೊತೆ ಸಂಬಂಧ ಬೆಳೆಸಲು ಮುಂದಾಗಿದ್ದನಂತೆ. ನಂತ್ರ ಪತಿ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ಶುರು ಮಾಡಿದ್ದಾರಂತೆ.