ಈ ವರ್ಷ ಬಿಹಾರ ಚುನಾವಣೆ ಜೊತೆ ಒಂದು ಲೋಕಸಭೆ ಹಾಗೂ 64 ವಿಧಾನಸಭೆಯ ಸೀಟುಗಳಿಗೆ ಉಪ ಚುನಾವಣೆ ನಡೆಯಲಿದೆ. ಹೀಗೆಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ನವೆಂಬರ್ 29 ರ ಮೊದಲು ಬಿಹಾರದ ವಿಧಾನಸಭಾ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಬಿಹಾರ ಚುನಾವಣೆಯ ದಿನಾಂಕ ಇನ್ನೂ ಘೋಷಿಸಲಾಗಿಲ್ಲವಾದರೂ, ಚುನಾವಣಾ ಆಯೋಗವು ಶೀಘ್ರದಲ್ಲೇ ಚುನಾವಣಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಿದೆ. ದೇಶದಲ್ಲಿ ಒಂದು ಲೋಕಸಭೆ ಮತ್ತು 64 ವಿಧಾನಸಭಾ ಸ್ಥಾನಗಳು ಖಾಲಿ ಇವೆ. ಇಂದು ಚುನಾವಣಾ ಆಯೋಗ ಮಹತ್ವದ ಸಭೆ ನಡೆಸಿದೆ. ಈ ಸಭೆಯಲ್ಲಿ ಎಲ್ಲಾ ರಾಜ್ಯಗಳ ಚುನಾವಣಾ ಅಧಿಕಾರಿಗಳ ವರದಿಯನ್ನು ಪರಿಶೀಲಿಸಲಾಗಿದೆ. ಕೊರೊನಾ ಮತ್ತು ಪ್ರವಾಹದಿಂದಾಗಿ ಉಪ ಚುನಾವಣೆಯನ್ನು ಮುಂದೂಡಬೇಕೆಂದು ಅನೇಕ ರಾಜ್ಯಗಳು ಒತ್ತಾಯಿಸಿವೆ.
ಬಿಹಾರ ಹಾಗೂ 65 ಸೀಟುಗಳ ಉಪಚುನಾವಣೆಗೆ ಶೀಘ್ರವೇ ದಿನಾಂಕ ಘೋಷಣೆ ಮಾಡುವುದಾಗಿ ಚುನಾವಣಾ ಆಯೋಗ ಹೇಳಿದೆ. ಎಲ್ಲ ಚುನಾವಣೆಗಳು ನವೆಂಬರ್ 29ರೊಳಗೆ ಮುಗಿಯುವ ಸಾಧ್ಯತೆಯಿದೆ. ಬಿಹಾರದಲ್ಲಿ ಈಗಾಗಲೇ ಚುನಾವಣಾ ಕಣ ರಂಗೇರಿದೆ.