ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಲೆ ಇದೆ. ಈ ಮಧ್ಯೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಕಳೆದ 24 ಗಂಟೆಗಳಲ್ಲಿ ಕೊರೊನಾ ಸೋಂಕಿನ ಪರೀಕ್ಷೆ ನಡೆಸಿದ ಲ್ಯಾಬ್‌ಗಳ ಪಟ್ಟಿಗೆ ಇನ್ನೂ 10 ಲ್ಯಾಬ್‌ಗಳನ್ನು ಸೇರಿಸಲಾಗಿದೆ.
ಸದ್ಯ ಸರ್ಕಾರಿ ಲ್ಯಾಬ್‌ಗಳ ಸಂಖ್ಯೆ 880 ಇದೆ. ಖಾಸಗಿ ಲ್ಯಾಬ್‌ಗಳ ಸಂಖ್ಯೆ 364 ಆಗಿದೆ. ಆರ್ಟಿಪಿಸಿಆರ್ ಆಧಾರಿತ ಪರೀಕ್ಷಾ ಪ್ರಯೋಗಾಲಯವು 638 ಇದ್ದರೆ ಟ್ರೂಟ್ ಆಧಾರಿತ ಪರೀಕ್ಷಾ ಪ್ರಯೋಗಾಲಯಗಳ ಸಂಖ್ಯೆ 504 ಆಗಿದೆ. ಸಿಬಿಎನ್ಎಟಿ ಆಧಾರಿತ ಪರೀಕ್ಷಾ ಪ್ರಯೋಗಾಲಯ ಸಂಖ್ಯೆ 102 ಇದೆ.
ಈ 1,244 ಲ್ಯಾಬ್‌ಗಳು ಜುಲೈ 16 ರಂದು ದಾಖಲೆಯ 3,33,228 ಸ್ವ್ಯಾಬ್‌ಗಳನ್ನು ಪರೀಕ್ಷಿಸಿ ಕೊರೊನಾ ವೈರಸ್‌ನ ಸೋಂಕನ್ನು ಪತ್ತೆ ಮಾಡಿವೆ. ಇದುವರೆಗೆ ಒಟ್ಟು 1,30,72,718 ಮಾದರಿಗಳನ್ನು ಪರೀಕ್ಷಿಸಲಾಗಿದೆ.