alex Certify ನೆಚ್ಚಿನ ತಾಣ ಶಿಮ್ಲಾದಲ್ಲಿ ಏನುಂಟು…? ಏನಿಲ್ಲ….? ಇಲ್ಲಿದೆ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಚ್ಚಿನ ತಾಣ ಶಿಮ್ಲಾದಲ್ಲಿ ಏನುಂಟು…? ಏನಿಲ್ಲ….? ಇಲ್ಲಿದೆ ವಿವರ

ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಮತ್ತೊಂದು ಹನಿಮೂನ್ ಸ್ಪಾಟ್. ಹಾಗೆಂದು ಇದು ನವಜೋಡಿಗಳಿಗೆ ಮಾತ್ರ ಸೀಮಿತವಲ್ಲ. ಪ್ರವಾಸ ಪ್ರಿಯರಿಗೆಲ್ಲ ಬಹು ಇಷ್ಟವಾಗುವ ತಾಣ.

ಇಲ್ಲಿನ ಮೈಕೊರೆವ ಚಳಿ, ಬೆಟ್ಟಗಳ ಸಾಲು, ಹಸಿರು ವನರಾಶಿ, ಬಣ್ಣಬಣ್ಣದ ಹೂವುಗಳು, ಅರ್ಕೆಡ್ ಹೂವುಗಳು ಶಿಮ್ಲಾಗೆ ಹೊಸ ಮೆರುಗನ್ನೇ ತಂದು ಕೊಡುತ್ತವೆ.

ಆರು ಪುಟಾಣಿ ಬೋಗಿಗಳ ನ್ಯಾರೋಗೇಜ್ ರೈಲಿನ ಅದ್ಭುತ ಪ್ರಯಾಣವನ್ನು ಅನುಭವಿಸಬೇಕಿದ್ದರೆ ನೀವೊಮ್ಮೆ ಅದರಲ್ಲಿ ವಿರಾಜಮಾನರಾಗಲೇ ಬೇಕು. ವರ್ಷವಿಡೀ ಈ ತಾಣ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಬಹುತೇಕ ಈ ನಗರ ಹಿಮಾಲಯದ ಲಕ್ಷಣಗಳನ್ನೇ ಹೊಂದಿರುವುದು ವಿಶೇಷ.

ಸಮುದ್ರ ಮಟ್ಟದಿಂದ ಸುಮಾರು 7500 ಅಡಿಗಳ ಎತ್ತರ ಸ್ಥಳ ಫಾಗು ಎಂಬಲ್ಲಿಂದ ಹಿಮಾಲಯದ ಹಿಮಾಚ್ಛಾದಿತ ಶಿಖರಗಳನ್ನು ವೀಕ್ಷಿಸಬಹುದು. ಇನ್ನೂ 500 ಅಡಿಗಳ ಮೇಲೆ ಕುಫ್ರಿ ಎಂಬ ಹಿಮಾಲಯದ ವನ್ಯಜೀವಿಗಳ ಅಭಯದಾಮ, ಪ್ರವಾಸೋದ್ಯಮ ಇಲಾಖೆಯ ಉದ್ಯಾನವನ ಚಾರಣಕ್ಕೆ ಹೇಳಿ ಮಾಡಿಸಿದ ಶಿಖರ, ಕೊರಕಲುಗಳಿವೆ. ಇದಕ್ಕೆಂದೇ ಇಲ್ಲಿ ಕುದುರೆಗಳು ಬಾಡಿಗೆಗೆ ಸಿಗುತ್ತವೆ.

ಹಿಮಾಲಯನ್ ಲಂಗೂರ್ ಎಂಬ ಕಪ್ಪು ಮುಖದ ಕೋತಿಗಳು ಇಲ್ಲಿನ ಮತ್ತೊಂದು ವೈಶಿಷ್ಟ್ಯ. ಇಲ್ಲಿ ಇಂಗ್ಲಿಷರು ಕಟ್ಟಿದ ಸುಂದರವಾದ ಚರ್ಚ್ ಇದೆ. ಇವೆಲ್ಲವನ್ನೂ ನೋಡಲು ಎರಡು ಕಣ್ಣು ಸಾಲದು ಎಂಬುದು ಮಾತ್ರ ಸತ್ಯ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...