ಸೈನ್ಯದಲ್ಲಿ ಸೇರಿ ಅನೇಕ ವರ್ಷಗಳ ಕಾಲ ದೇಶ ಸೇವೆ ಮಾಡಿದ್ದ ನಿವೃತ್ತ ಸೈನಿಕರೊಬ್ಬರಿಗೆ ಅವ್ರ ಪತ್ನಿಯೇ ಈಗ ವಿಲನ್ ಆಗಿದ್ದಾಳೆ. ಕಷ್ಟಪಟ್ಟು ದುಡಿದ ಹಣದಲ್ಲಿ ನಿವೃತ್ತ ಸೈನಿಕರು ಮನೆ ನಿರ್ಮಾಣ ಮಾಡಿದ್ದರು. ಮನೆಯನ್ನು ಪತ್ನಿ ಹೆಸರಿನಲ್ಲಿ ನಿರ್ಮಾಣ ಮಾಡಿದ್ದೇ ತಪ್ಪಾಗಿದೆ. ಪತ್ನಿ ಈಗ ತನ್ನ ನಿಜ ಬಣ್ಣ ಬಯಲು ಮಾಡ್ತಿದ್ದಾಳೆ.
ಘಟನೆ ರೋಹ್ತಕ್ ನಲ್ಲಿ ನಡೆದಿದೆ. ಸೈನಿಕ 2018ರಲ್ಲಿ ಜಾಗ ಖರೀದಿ ಮಾಡಿ ಅಲ್ಲಿ ಮನೆ ನಿರ್ಮಾಣ ಮಾಡಿದ್ದನಂತೆ. ಪತ್ನಿ ಹೆಸರಿನಲ್ಲಿ ಮನೆಯಿದೆ. ಆದ್ರೆ ಮನೆ ನಿರ್ಮಾಣ ಸೇರಿದಂತೆ ಎಲ್ಲ ಖರ್ಚನ್ನು ಸೈನಿಕ ನಿಭಾಯಿಸಿದ್ದಾರೆ. ಚೆಕ್ ಮೂಲಕ ಬ್ಯಾಂಕ್ ಗೆ ಹಣ ಪಾವತಿ ಮಾಡಿದ್ದಾರೆ.
ಕಳೆದ ಒಂದು ವರ್ಷದ ಹಿಂದೆ ಪತಿ-ಪತ್ನಿ ಮಧ್ಯೆ ಜಗಳ ನಡೆದಿತ್ತಂತೆ. ಪತ್ನಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಳಂತೆ. ಇದಾದ್ಮೇಲೆ ಮನೆಯಿಂದ ಪತಿ ಹಾಗೂ ಅತ್ತೆ-ಮಾವನನ್ನು ಹೊರ ಹಾಕಲು ಪತ್ನಿ ಮುಂದಾಗಿದ್ದಾಳೆ. ಇದನ್ನು ವಿರೋಧಿಸಿ ನಿವೃತ್ತ ಸೈನಿಕ ಕೋರ್ಟ್ ನಲ್ಲಿ ದೂರು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಯತಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದೆ. ಮನೆಯಿಂದ ಯಾರನ್ನೂ ಹೊರಗೆ ಕಳುಹಿಸಬಾರದು. ಹಾಗೆ ಮನೆ ಮಾರಾಟ ಅಥವಾ ಮನೆ ಮೇಲೆ ಸಾಲ ತೆಗೆದುಕೊಳ್ಳಬಾರದು ಎಂದು ಕೋರ್ಟ್ ಹೇಳಿದೆ.