ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ಶನಿವಾರದಿಂದ ಶುರುವಾಗಲಿದೆ. ಈಗಾಗಲೇ ರಾಜ್ಯಗಳಲ್ಲಿ ಡ್ರೈರನ್ ಕೂಡ ನಡೆದಿದೆ. ಲಸಿಕೆ ಹಾಕಲು ಸರ್ಕಾರ ಸಂಪೂರ್ಣ ಸಿದ್ಧವಾಗಿದೆ. ಸರ್ಕಾರ ಕೋವಿಡ್ ಶೀಲ್ಡ್ ಹಾಗೂ ಕೋವಾಕ್ಸಿನ್ ಲಸಿಕೆಗೆ ಒಪ್ಪಿಗೆ ನೀಡಿದೆ. ಈ ಎರಡು ಲಸಿಕೆಯಲ್ಲಿ ನಿಮಗೆ ಯಾವ ಲಸಿಕೆ ಹಾಕಲಾಗಿದೆ ಎಂಬುದನ್ನು ನೀವು ಸುಲಭವಾಗಿ ತಿಳಿಯಬಹುದು.
ಲಸಿಕೆ ಜೊತೆ ಸರ್ಕಾರ ಮತ್ತೊಂದು ಮಹತ್ವದ ಯೋಜನೆ ಪ್ರಾರಂಭಿಸಲು ಸಿದ್ಧತೆ ನಡೆಸಿದೆ. ಲಸಿಕೆ ಸಮಯದಲ್ಲಿ ಜನರ ಆರೋಗ್ಯ ಐಡಿ ಸಿದ್ಧವಾಗಲಿದೆ. ಇದು ಡಿಜಿಟಲೀಕರಣಗೊಂಡಿರುತ್ತದೆ. ಇದು ಸರ್ಕಾರದ ದಾಖಲೆಗಳ ಭಾಗವಾಗಿರುತ್ತದೆ. ಲಸಿಕೆ ಸಮಯದಲ್ಲಿ ಗುರುತಿನ ಚೀಟಿಯಾಗಿ ಆಧಾರ್ ಕಾರ್ಡ್ ಕೂಡ ನೀಡಬಹುದು. ಆಧಾರ್ ಕಾರ್ಡ್ ನೀಡಿದ ತಕ್ಷಣ ಯುಹೆಚ್ ಐಡಿ ರಚಿಸಲಾಗುವುದು.
ಲಸಿಕೆ ನೀಡಲು ಆಧಾರ್ ಕಡ್ಡಾಯವಲ್ಲ. ಸರ್ಕಾರ ಫೋಟೋ ದಾಖಲೆಯಲ್ಲಿ ಆಧಾರ್ ಹೆಸರು ಸೇರಿಸಿಲ್ಲ. ಆದ್ರೆ ಎಷ್ಟು ಜನರು ಆಧಾರ್ ಕಾರ್ಡ್ ನೀಡ್ತಾರೆ ಎಂಬುದನ್ನು ನೋಡಬೇಕಿದೆ. ಇದೇ ವೇಳೆ ಸರ್ಕಾರ ಯಾರಿಗೆ ಯಾವ ಲಸಿಕೆ ಹಾಕಲಾಗಿದೆ ಎಂಬ ಮಾಹಿತಿಯನ್ನೂ ಸಂಗ್ರಹಿಸಿಡಲಿದೆ. ಕೋವಿನ್ ಅಪ್ಲಿಕೇಷನ್ ನಲ್ಲಿ ಇದ್ರ ದಾಖಲೆ ಇರಲಿದೆ. ಕೋವಿಡ್ ಅಪ್ಲಿಕೇಷನ್ ನಲ್ಲಿ ನಿಮಗೆ ಯಾವ ಲಸಿಕೆ ನೀಡಲಾಗಿದೆ ಎಂಬ ಮಾಹಿತಿಯನ್ನು ನೀವು ಪಡೆಯಬಹುದು. ಲಸಿಕೆ ಬಾಟಲಿ ತೆರೆದ ನಾಲ್ಕು ಗಂಟೆಯಲ್ಲಿ ಲಸಿಕೆ ನೀಡಬೇಕು.