ನಾಳೆ ಈ ವರ್ಷದ ಕೊನೆಯ ರಾಹುಗ್ರಸ್ತ ಚಂದ್ರಗ್ರಹಣ. ಇದನ್ನು ಛಾಯಾ ಚಂದ್ರಗ್ರಹಣ ಎಂದೂ ಕೂಡ ಕರೆಯುತ್ತಾರೆ. ನಾಳೆ ಕಾರ್ತಿಕ ಹುಣ್ಣಿಮೆ ಕೂಡ ಆಗಿರುವುದರಿಂದ ಚಂದ್ರ ಗ್ರಹಣ ಮಹತ್ವ ಪಡೆದುಕೊಂಡಿದೆ.
ವಿಜ್ಞಾನಿಗಳ ಪ್ರಕಾರ ಗ್ರಹಣ ಸೌರಮಂಡಲದ ಸಹಜ ಪ್ರಕ್ರಿಯೆ. ಆದರೆ ಜೋತಿಷ್ಯದ ಪ್ರಕಾರ ರಾಹು ಚಂದ್ರನನ್ನು ಆವರಿಸುವ ಕಾರಣ ರಾಹುಗ್ರಸ್ತ ಚಂದ್ರಗ್ರಹಣವಾಗಿದ್ದು ಕೆಲ ರಾಶಿಯವರು ಎಚ್ಚರಿಕೆಯಿಂದಿರುವುದು ಒಳಿತು ಎಂದಿದ್ದಾರೆ. ಅಲ್ಲದೇ ರಾಹುಗ್ರಸ್ತ ಚಂದ್ರಗ್ರಹಣ ಪ್ರಕೃತಿಯಲ್ಲಿ ಹಲವು ವೈಪರಿತ್ಯಕ್ಕೆ ಕಾರಣವಾಗಲಿದೆ. ಕಾಯಿಲೆಗಳ ಹೆಚ್ಚಳ, ಪ್ರಕೃತಿ ವಿಕೋಪ, ಅವಘಡಗಳು ಹೆಚ್ಚುವ ಸಾಧ್ಯತೆ ದಟ್ಟಾಗಿದೆ.
ಅಂದ ಹಾಗೇ ಈ ಗ್ರಹಣ ಭಾರತದಲ್ಲಿ ಗೋಚರವಾಗುವುದಿಲ್ಲ. ಏಷ್ಯಾ, ಆಸ್ಟ್ರೇಲಿಯಾ, ಉತ್ತರ ಹಾಗೂ ದಕ್ಷಿಣ ಅಮೆರಿಕಾಗಳಲ್ಲಿ ಗೋಚರವಾಗಲಿದೆ. ಗ್ರಹಣ ಸ್ಪರ್ಶ ಮಧ್ಯಾಹ್ನ 1:2 ನಿಮಿಷ, ಮಧ್ಯಕಾಲ ಮಧ್ಯಾಹ್ನ 3:12, ಗ್ರಹಣ ಮೋಕ್ಷ ಕಾಲ ಸಂಜೆ 5:20