ದೇಶದಾದ್ಯಂತ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ನವರಾತ್ರಿ ಶುಭ ಕೋರಿದ್ದಾರೆ. ಜನರು ದೇವಿ ಕೃಪೆಯಿಂದ ಸಂತೋಷ, ಶಾಂತಿ ಮತ್ತು ಸಮೃದ್ಧಿಯಿಂದಿರಲೆಂದು ಪ್ರಾರ್ಥಿಸಿದ್ದಾರೆ. ನವರಾತ್ರಿಯ ಮೊದಲ ದಿನ ತಾಯಿ ಶೈಲಪುತ್ರಿಗೆ ನಮಸ್ಕಾರವೆಂದು ಮೋದಿ ಟ್ವೀಟ್ ಮಾಡಿದ್ದಾರೆ.
ನವರಾತ್ರಿಯ 9 ದಿನ ದೇವಿ ಕೃಪೆಗೆ ಪಾತ್ರರಾಗಲು ಜನರು ಉಪವಾಸ, ವೃತ ಮಾಡುತ್ತಾರೆ. ಇದ್ರಲ್ಲಿ ಪ್ರಧಾನಿ ನರೇಂದ್ರ ಮೋದಿ ಹೊರತಾಗಿಲ್ಲ. ಕಳೆದ 35 ವರ್ಷಗಳಿಂದ ನವರಾತ್ರಿಯಲ್ಲಿ ಪಿಎಂ ಮೋದಿ 9 ದಿನಗಳ ಕಾಲ ಉಪವಾಸವಿರ್ತಾರೆ. ಇದು 2014 ರಲ್ಲಿ ಎಲ್ಲರಿಗೂ ಗೊತ್ತಾಗಿದೆ. ಆ ಸಮಯದಲ್ಲಿ ಪಿಎಂ ಮೋದಿ ಅಮೆರಿಕ ಪ್ರವಾಸದಲ್ಲಿದ್ದರು. ಈ ವೇಳೆ ಔತಣಕೂಟಕ್ಕೆ ಆಹ್ವಾನ ಬಂದಾಗ ನವರಾತ್ರಿ ಉಪವಾಸದಲ್ಲಿರುವುದಾಗಿ ತಿಳಿಸಿದ್ದರು.
ಪ್ರಧಾನಿ ಮೋದಿ ನವರಾತ್ರಿ ಸಮಯದಲ್ಲಿ ದಿನಕ್ಕೆ ಒಂದು ಬಾರಿ ಹಣ್ಣುಗಳನ್ನು ಸೇವಿಸ್ತಾರೆ. ಸಂಜೆ ನಿಂಬೆ ಪಾನಕ ಸೇವನೆ ಮಾಡ್ತಾರೆ. ನವರಾತ್ರಿ ಉಪವಾಸದ ಸಂದರ್ಭದಲ್ಲೂ ಅವರು ಯೋಗ ಮಾಡ್ತಾರೆ. ಯೋಗದ ನಂತ್ರ ಪೂಜೆ ಮಾಡ್ತಾರೆ. ಸಂಜೆ ಕೂಡ ಪೂಜೆ ಮಾಡ್ತಾರೆ. ನವರಾತ್ರಿ ಸಂದರ್ಭದಲ್ಲಿ ಮೋದಿ ಜನರ ಜೊತೆ ಹೆಚ್ಚು ಮಾತನಾಡುವುದಿಲ್ಲ. ಶಕ್ತಿ ಕುಂದದಿರಲಿ ಎನ್ನುವ ಕಾರಣಕ್ಕೆ ಅವರು ಹೀಗೆ ಮಾಡ್ತಾರೆ. ನವರಾತ್ರಿಯಲ್ಲಿ ರಾತ್ರಿ 10 ಗಂಟೆಯೊಳಗೆ ಎಲ್ಲ ಕೆಲಸವನ್ನು ಮುಗಿಸ್ತಾರೆ.