ಕೇವಾಡಿಯ: ದೇಶದ ಮೊಟ್ಟ ಮೊದಲ ಸೀ ಪ್ಲೇನ್ ಸಮುದ್ರ ವಿಮಾನ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ನ ಕೆವಾಡಿಯದಲ್ಲಿ ಚಾಲನೆ ನೀಡಿದ್ದಾರೆ.
ಅಹಮದಾಬಾದ್ ನ ಸಬರಮತಿ ರಿವರ್ ಫ್ರಂಟ್ ನಲ್ಲಿ ಪ್ರಧಾನಿ ಮೋದಿ ಈ ವಿಶೇಷ ಸಮುದ್ರ ವಿಮಾನಕ್ಕೆ ಚಾಲನೆ ನೀಡಿದ್ದಾರೆ. ಬಳಿಕ ಸಬರಮತಿ ರಿವರ್ ಫ್ರಂಟ್ ನಿಂದ ನರ್ಮಾದಾ ಜಿಲ್ಲೆಯ ಕೆವಾಡಿಯಾದಲ್ಲಿರುವ ಸರ್ದಾರ್ ಪಟೇಲ್ ಏಕತಾ ಪ್ರತಿಮೆ ವರೆಗೆ ಈ ವಿಮಾನದಲ್ಲಿ ತೆರಳಿದರು.
ಇನ್ನು ಈ ಸೀ ಪ್ಲೇನ್ 19 ಆಸನಗಳನನ್ನು ಹೊಂದಿದ್ದು, 14 ಪ್ರಯಾಣಿಕರು ಇದರಲ್ಲಿ ಪ್ರಯಾಣಿಸಬಹುದಾಗಿದೆ. ಸ್ಪೈಸ್ ಜೆಟ್ ಈ ಸೀ ಪ್ಲೇನ್ ನಿರ್ವಹಣೆ ಮಾಡುತ್ತಿದ್ದು, ಸಬರಮತಿ ರಿವರ್ ಫ್ರಂಟ್ ನಿಂದ ಕೆವಾಡಿಯಾ ಏಕತಾ ಪ್ರತಿಮೆವರೆಗೆ ತೆರಳಲು ತಡೆರಹಿತ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಈ ಸೇವೆ ಆರಂಭಿಸಲಾಗಿದೆ.