ಕೊರೊನಾ ವೈರಸ್ ಜನರ ಜೀವದ ಜೊತೆ ಜೀವನವನ್ನೂ ಬಲಿ ಪಡೆಯುತ್ತಿದೆ. ಎಷ್ಟೋ ಉದ್ಯಮಗಳು ನೆಲಕಚ್ಚಿ ಹೋಗಿವೆ. ಇನ್ನೊಂದಿಷ್ಟು ಉದ್ಯಮಗಳಂತೂ ಬಾಗಿಲು ಮುಚ್ಚಿವೆ. ಹೀಗಿರುವಾಗ ಕೇಂದ್ರ ಸರ್ಕಾರ ಜನತೆಯ ಅನುಕೂಲಕ್ಕಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡಿದೆ. ಇದೀಗ ಮತ್ತೊಂದು ಪ್ಯಾಕೇಜ್‌ನ ಜನತೆಗೆ ನೀಡಲಿದೆ ಸರ್ಕಾರ ಎಂದು ಹೇಳಲಾಗುತ್ತಿದೆ.
ಹೌದು, ಈಗಾಗಲೇ ಆರ್ಥಿಕತೆ ಸುಧಾರಿಸಲು ಅನೇಕ ಕ್ರಮ ಕೈಗೊಂಡ ಬೆನ್ನಲ್ಲೇ ಆರ್ಥಿಕತೆಯ ವೇಗ ಹೆಚ್ಚಿಸಲು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಹೀಗಾಗಿ ಮತ್ತೊಮ್ಮೆ ಜನರಿಗೆ ಬಹು ದೊಡ್ಡ ಪ್ಯಾಕೇಜ್ ಸಿಗಲಿದೆ ಎನ್ನಲಾಗಿದೆ.
ಸೆಪ್ಟೆಂಬರ್ ಅಥವಾ ನವೆಂಬರ್‌ನಲ್ಲಿ ಮತ್ತೊಂದು ಪ್ಯಾಕೇಜ್ ಸಿಗಬಹುದು ಎಂದು ಅಂದಾಜಿಸಲಾಗಿದೆ. ಕೇಂದ್ರ ಸರ್ಕಾರ ಕೊವಿಡ್‌ನಿಂದ ಹಿಂಜರಿತವಾಗಿರುವ ಆರ್ಥಿಕತೆ ಚೇತರಿಕೆಗೆ ಅಂತಿಮ ಪ್ಯಾಕೇಜ್ ಘೋಷಣೆ ಮಾಡಬಹುದು ಎಂದು ಆರ್‌ಬಿಐ ನಿರ್ದೇಶಕ ಗುರುಮೂರ್ತಿ ಹೇಳಿದ್ದಾರೆ.