ದೇಶದ ಕೆಲ ಮಾರ್ಗಗಳಲ್ಲಿನ ರೈಲು ಸಂಚಾರವನ್ನು ಖಾಸಗಿಯವರಿಗೆ ವಹಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಇದಕ್ಕೆ ಪೂರಕ ಪ್ರಕ್ರಿಯೆಗಳು ಈಗಾಗಲೇ ನಡೆಯುತ್ತಿವೆ. ಇದರ ಮಧ್ಯೆ ದೇಶದಲ್ಲಿ ಕಾಣಿಸಿಕೊಂಡಿರುವ ಕೊರೊನಾ ಕಾರಣಕ್ಕೆ ಖಾಸಗಿ ರೈಲುಗಳ ಸಂಚಾರ ವಿಳಂಬವಾಗಬಹುದೆಂದು ಹೇಳಲಾಗಿತ್ತು.
ಇದೀಗ ಈ ಕುರಿತು ರೈಲ್ವೆ ಸಚಿವಾಲಯ ಸ್ಪಷ್ಟನೆ ನೀಡಿದ್ದು, ಪ್ರಸ್ತಾವಿತ ಖಾಸಗಿ ರೈಲುಗಳ ಸೇವೆ 2023 ರ ಮಾರ್ಚ್ ತಿಂಗಳಿನಿಂದ ಆರಂಭವಾಗಲಿದೆ ಎಂದು ತಿಳಿಸಿದೆ. ಯೋಜನೆಯಲ್ಲಿ ಯಾವುದೇ ವಿಳಂಬವಾಗುವುದಿಲ್ಲ ಎಂದು ಸಚಿವಾಲಯ ಭಾನುವಾರ ಹೇಳಿದೆ.
ರೈಲು ಮಾರ್ಗಗಳನ್ನು ಖಾಸಗಿಯವರಿಗೆ ವಹಿಸುವ ಕುರಿತಂತೆ ಟೆಂಡರ್ ಪ್ರಕ್ರಿಯೆಗಳು ಈಗಾಗಲೇ ಆರಂಭವಾಗಿದ್ದು, 2021ರ ಮಾರ್ಚ್ ವೇಳೆಗೆ ಇದು ಅಂತ್ಯಗೊಳ್ಳಲಿದೆ ಎನ್ನಲಾಗಿದೆ. 2023ರ ಮಾರ್ಚ್ ತಿಂಗಳಿನಿಂದ ಖಾಸಗಿ ರೈಲುಗಳ ಸಂಚಾರ ಆರಂಭವಾಗುವುದು ನಿಶ್ಚಿತ ಎಂದು ತಿಳಿದುಬಂದಿದೆ.