ಕೊರೊನಾ ನಿಯಂತ್ರಣಕ್ಕೆ ಸಾಕಷ್ಟು ಪ್ರಯತ್ನ ನಡೆಯುತ್ತಿದೆ. ಆದ್ರೆ ಕೊರೊನಾ ಅಬ್ಬರ ನಿಲ್ಲಿಸುತ್ತಿಲ್ಲ. ದೇಶದಲ್ಲಿ ಸೋಂಕಿತರ ಸಂಖ್ಯೆ 9 ಲಕ್ಷ 36 ಸಾವಿರ 181 ಕ್ಕೆ ಏರಿದೆ. ಮಂಗಳವಾರ ದೇಶದಲ್ಲಿ 29 ಸಾವಿರ 429 ಹೊಸ ಪ್ರಕರಣಗಳು ದಾಖಲಾಗಿವೆ. 582 ರೋಗಿಗಳು ಸಾವನ್ನಪ್ಪಿದ್ದಾರೆ. ಇದು ಒಂದೇ ದಿನದಲ್ಲಿ ಅತಿ ಹೆಚ್ಚು ಸಾವು ಕಂಡ ದಿನವಾಗಿದೆ.
ಇದಕ್ಕೂ ಮೊದಲು ಜುಲೈ 13 ರಂದು ಗರಿಷ್ಠ ಹೊಸ ಪ್ರಕರಣಗಳ ಸಂಖ್ಯೆ 28 ಸಾವಿರ 178. 20 ಸಾವಿರ 968 ರೋಗಿಗಳು ಗುಣಮುಖರಾಗಿರುವುದು ನೆಮ್ಮದಿ ಸುದ್ದಿ.
ಆರೋಗ್ಯ ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ, ದೇಶದಲ್ಲಿ ಪ್ರಸ್ತುತ 3 ಲಕ್ಷ 19 ಸಾವಿರ 840 ಸಕ್ರಿಯ ಕೊರೊನಾ ಪ್ರಕರಣಗಳಿವೆ. ಈವರೆಗೆ 24 ಸಾವಿರ 309 ರೋಗಿಗಳು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಈವರೆಗೆ 5 ಲಕ್ಷ 92 ಸಾವಿರ 31 ರೋಗಿಗಳು ಚೇತರಿಸಿಕೊಂಡಿದ್ದಾರೆ.
ಕೊರೊನಾದ ಅತ್ಯಂತ ಸಕ್ರಿಯ ಪ್ರಕರಣಗಳು ಮಹಾರಾಷ್ಟ್ರದಲ್ಲಿವೆ. ಮಹಾರಾಷ್ಟ್ರದ ಆಸ್ಪತ್ರೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ನಂತರದ ಸ್ಥಾನದಲ್ಲಿ ತಮಿಳುನಾಡು. ಮೂರನೇ ಸ್ಥಾನ ದೆಹಲಿ. ಗುಜರಾತ್ ನಾಲ್ಕನೇ ಸ್ಥಾನ ಮತ್ತು ಪಶ್ಚಿಮ ಬಂಗಾಳ ಐದನೇ ಸ್ಥಾನದಲ್ಲಿದೆ.