![](https://kannadadunia.com/wp-content/uploads/2020/08/31244cf820cce2373a06d47edec7d5d02c20b02f71fdbfdd4f78dd08685ba661.jpg)
ಸೂಪರ್ ಹಿಟ್ ಚಲನಚಿತ್ರ ‘ದೃಶ್ಯಂ’ ನಿರ್ದೇಶಿಸಿದ್ದ ನಿಶಿಕಾಂತ್ ಕಾಮತ್ ವಿಧಿವಶರಾಗಿದ್ದಾರೆ. 50 ವರ್ಷದ ನಿಶಿಕಾಂತ್ ಕಾಮತ್ ಯಕೃತ್ ಸಮಸ್ಯೆಯಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಂಜೆ ನಿಧನರಾಗಿದ್ದಾರೆ.
ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜುಲೈ 31 ರಂದು ಅವರನ್ನು ಹೈದರಾಬಾದಿನ ಎಐಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಜ್ಞ ವೈದ್ಯರ ನಿರಂತರ ಚಿಕಿತ್ಸೆಯ ಬಳಿಕವೂ ಚಿಕಿತ್ಸೆ ಫಲಕಾರಿಯಾಗದೆ ನಿಶಿಕಾಂತ್ ಕಾಮತ್ ವಿಧಿವಶರಾಗಿದ್ದಾರೆ.
ಮೂಲತಃ ಮಹಾರಾಷ್ಟ್ರದ ಮುಂಬೈನವರಾದ ನಿಶಿಕಾಂತ್ ಕಾಮತ್ ಮುಂಬೈ ಮೇರಿ ಜಾನ್, ಫೋರ್ಸ್, ರಾಕಿ ಹಾಂಡ್ಸಂ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದರು. ಅವರ ನಿರ್ದೇಶನದ ‘ದೃಶ್ಯಂ’ ಚಿತ್ರ ಕನ್ನಡವೂ ಸೇರಿದಂತೆ ವಿವಿಧ ಭಾಷೆಗಳಿಗೆ ರಿಮೇಕ್ ಆಗಿತ್ತು.