ಉತ್ತರ ಪ್ರದೇಶದ ಕುಖ್ಯಾತ ಕ್ರಿಮಿನಲ್ ವಿಕಾಸ್ ದುಬೆ ಶುಕ್ರವಾರದಂದು ನಡೆದ ಪೊಲೀಸ್ ಎನ್ಕೌಂಟರ್ನಲ್ಲಿ ಹತನಾಗಿದ್ದಾನೆ. ಎನ್ಕೌಂಟರ್ ಕುರಿತು ಸಾರ್ವಜನಿಕ ವಲಯದಲ್ಲಿ ಪರ – ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿರುವ ಮಧ್ಯೆ ವಿಕಾಸ್ ಹೊಂದಿದ್ದ ಆಸ್ತಿ ಎಲ್ಲರನ್ನು ದಂಗಾಗಿಸಿದೆ.
ವಿಕಾಸ್ ದುಬೆ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಆಸ್ತಿ ಹೊಂದಿದ್ದು, ಯುಎಇ ಮತ್ತು ಥಾಯ್ಲೆಂಡ್ ನಲ್ಲಿ ಸಹಚರನ ಹೆಸರಿನಲ್ಲಿ ಪೆಂಟ್ ಹೌಸ್ ಖರೀದಿಸಿದ್ದ ಎನ್ನಲಾಗಿದೆ. ಅಲ್ಲದೆ ಈತ ಕಳೆದ 3 ವರ್ಷಗಳ ಅವಧಿಯಲ್ಲಿ 14 ದೇಶಗಳಿಗೆ ಭೇಟಿ ನೀಡಿದ್ದ ಎಂದು ಹೇಳಲಾಗಿದೆ.
ಇತ್ತೀಚೆಗಷ್ಟೇ ಲಕ್ನೋದ ಆರ್ಯ ನಗರದಲ್ಲಿ ಬರೋಬ್ಬರಿ 23 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಬಂಗಲೆಯೊಂದನ್ನು ಈತ ಖರೀದಿಸಿದ್ದು, ಜೊತೆಗೆ ಬೇನಾಮಿ ಹೆಸರಲ್ಲಿ 11 ಮನೆ ಮತ್ತು 16 ಫ್ಲಾಟ್ ಹೊಂದಿದ್ದ ಎನ್ನಲಾಗಿದೆ. ಇದೀಗ ಜಾರಿ ನಿರ್ದೇಶನಾಲಯ (ಇಡಿ) ಈತನ ಆಸ್ತಿ ಕುರಿತು ತನಿಖೆ ಆರಂಭಿಸಿದೆ.