ಕೇಂದ್ರ ಸರ್ಕಾರ ಲಾಕ್ ಡೌನ್ ನಲ್ಲಿ ಬಹಳಷ್ಟು ಸಡಿಲಿಕೆ ಮಾಡಿರುವ ಕಾರಣ ಸೋಮವಾರದಿಂದ ಧಾರ್ಮಿಕ ಮಂದಿರಗಳು ಆರಂಭವಾಗಿವೆ. ತಿರುಪತಿ ತಿಮ್ಮಪ್ಪನ ದೇಗುಲ ಸಹ ಭಕ್ತರಿಗಾಗಿ ತೆರೆಯಲಾಗಿದ್ದು, ಈವರೆಗೆ ದೇಗುಲ ಸಿಬ್ಬಂದಿ ಹಾಗೂ ಅವರ ಕುಟುಂಬದವರಿಗೆ ಮತ್ತು ಸೀಮಿತ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ಇದೀಗ ಪ್ರತಿನಿತ್ಯ 6000 ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದ್ದು, ಮೂರು ಸಾವಿರ ಮಂದಿಗೆ ಆನ್ಲೈನ್ ಮೂಲಕ ಹಾಗೂ ಮೂರು ಸಾವಿರ ಮಂದಿಗೆ ತಿರುಪತಿಯ ಕೌಂಟರ್ ನಲ್ಲಿ ದರ್ಶನಕ್ಕೆ ಟಿಕೆಟ್ ನೀಡಲಾಗುತ್ತದೆ.
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 65 ವರ್ಷ ಮೇಲ್ಪಟ್ಟ ಹಾಗೂ 10 ವರ್ಷದೊಳಗಿನ ಮಕ್ಕಳಿಗೆ ದರ್ಶನಕ್ಕೆ ಅವಕಾಶವಿರುವುದಿಲ್ಲವೆಂದು ತಿರುಪತಿ ತಿರುಮಲ ದೇವಸ್ವಂ ಮಂಡಳಿ ತಿಳಿಸಿದೆ. ತಿಮ್ಮಪ್ಪನ ದರ್ಶನಕ್ಕಾಗಿ ಈಗಾಗಲೇ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಬಹುದಿನಗಳ ಬಳಿಕ ಲಭಿಸುತ್ತಿರುವ ದರ್ಶನ ಭಾಗ್ಯಕ್ಕಾಗಿ ಕಾದು ನಿಂತಿದ್ದಾರೆ.