ಚೆನ್ನೈ: ಹುಟ್ಟುಹಬ್ಬದ ಆಚರಣೆ ವೇಳೆ ಕಾಲಿವುಡ್ ನಟ ವಿಜಯ್ ಸೇತುಪತಿ ತಲ್ವಾರ್ ನಿಂದ ಕೇಕ್ ಕತ್ತರಿಸಿ ಸಂಭ್ರಮಿಸಿರುವ ಘಟನೆ ನಡೆದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಜಯ್ ಸೇತುಪತಿ ತಲ್ವಾರ್ ನಿಂದ ಕೇಕ್ ಕತ್ತರಿಸುತ್ತಿರುವ ಫೋಟೋ ವೈರಲ್ ಆಗುತ್ತಿದ್ದಂತೆ ವಿಜಯ್ ನಡೆಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಎಚ್ಚೆತ್ತ ನಟ, ಸುದೀರ್ಘ ಪತ್ರ ಬರೆದು ಕ್ಷಮೆ ಕೋರಿದ್ದು, ಓರ್ವ ನಟನಾಗಿ ಮಾದರಿಯಾಗಬೇಕಿದ್ದ ನಾನು ಕೆಟ್ಟ ಉದಾಹರಣೆಯಾದಂತಾಗಿದೆ. ಇನ್ಮುಂದೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸುವುದಾಗಿ ತಿಳಿಸಿದ್ದಾರೆ.
ಹೊಸ ಚಿತ್ರದ ಶೂಟಿಂಗ್ ನಲ್ಲಿರುವ ವಿಜಯ್ ಶೂಟಿಂಗ್ ಸೆಟ್ ನಲ್ಲಿ ಬರ್ತ್ ಡೇ ಆಚರಿಸಿಕೊಂಡಿದ್ದಾರೆ. ಚಿತ್ರತಂಡ ನೀಡಿದ್ದ ತಲ್ವಾರ್ ನಿಂದ ಕೇಕ್ ಕಟ್ ಮಾಡಿದ್ದರು. ಈ ಫೋಟೋಗಳು ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.