ಬದಲಾವಣೆ ಜೀವನದ ಒಂದು ಭಾಗ. ಪ್ರತಿ ನಿತ್ಯ ಅನೇಕ ಬದಲಾವಣೆಗಳನ್ನು ಕಾಣಬಹುದು. ಜೀವನಶೈಲಿಯಲ್ಲಿ ವ್ಯತ್ಯಾಸ ಕಂಡುಬಂದಂತೆ ಭಾರತದಲ್ಲಿ ಮಹಿಳೆಯರು ಮತ್ತು ಪುರುಷರ ಸರಾಸರಿ ತೂಕವೂ ಬದಲಾಗಿದೆ.
ವರದಿಯ ಪ್ರಕಾರ, ಒಂದು ದಶಕದ ಹಿಂದೆ ದೇಶದಲ್ಲಿ ಇದ್ದ ಬಾಡಿ ಮಾಸ್ ಇಂಡೆಕ್ಸ್ ಈಗ ಬದಲಾಗಿದೆ. ಸುಮಾರು ಒಂದು ದಶಕದ ಹಿಂದೆ ಮಹಿಳೆಯರ ಸರಾಸರಿ ತೂಕ 50 ಕೆ.ಜಿ. ಇತ್ತು. ಅದು ಈಗ 55 ಕೆಜಿಯಾಗಿದೆ. 60 ಕೆಜಿಯಿದ್ದ ಭಾರತೀಯ ಪುರುಷರ ಸರಾಸರಿ ತೂಕವು ಈಗ 65 ಕೆ.ಜಿ.ಯಾಗಿದೆ. ಇಬ್ಬರ ಸರಾಸರಿ ತೂಕ 5-5 ಕೆಜಿ ಹೆಚ್ಚಾಗಿದೆ.
ಜನರ ಬಾಡಿ ಮಾಸ್ ಇಂಡೆಕ್ಸ್ ಈಗ ಬದಲಾಗಿದೆ. ಅಂದರೆ, ಈಗ 65 ಕೆಜಿ ತೂಕದ ಪುರುಷರು ಮತ್ತು 55 ಕೆಜಿ ತೂಕವಿರುವ ಮಹಿಳೆಯರನ್ನು ಫಿಟ್ ಎಂದು ಪರಿಗಣಿಸಲಾಗುತ್ತದೆ. ಬಾಡಿ ಮಾಸ್ ಇಂಡೆಕ್ಸ್ ಮೂಲಕ, ಒಬ್ಬ ವ್ಯಕ್ತಿಯು ಅವರ ದೇಹಕ್ಕೆ ಅನುಗುಣವಾಗಿ ಎಷ್ಟು ತೂಕ ಮತ್ತು ಎತ್ತರವನ್ನು ಹೊಂದಿರಬೇಕು ಎಂದು ನಿರ್ಧರಿಸಲಾಗುತ್ತದೆ. ಈ ಎತ್ತರ ಮತ್ತು ತೂಕವು ಬಿಎಂಐ ಮಾನದಂಡಕ್ಕಿಂತ ಹೆಚ್ಚಿದ್ದರೆ, ಅದು ದೇಹಕ್ಕೆ ಸೂಕ್ತವಲ್ಲವೆಂದು ಪರಿಗಣಿಸಲಾಗುತ್ತದೆ.
ಮಹಿಳಾ-ಪುರುಷರ ತೂಕದಲ್ಲಿ ಮಾತ್ರವಲ್ಲ ಎತ್ತರವೂ ಬದಲಾಗಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ಕೂಡ ಭಾರತೀಯರ ಎತ್ತರವನ್ನು ಹೆಚ್ಚಿಸಿದೆ. ಸುಮಾರು ಒಂದು ದಶಕದ ಹಿಂದೆ ಪುರುಷರ ಸರಾಸರಿ ಎತ್ತರವು 5 ಅಡಿ 6 ಇಂಚು ಇತ್ತು. ಮಹಿಳೆಯರ ಎತ್ತರ 5 ಅಡಿಯಿತ್ತು. ಈಗ ಪುರುಷರ ಎತ್ತರವು 5 ಅಡಿ 8 ಇಂಚುಗಳಾಗಿವೆ. ಮಹಿಳೆಯರ ಎತ್ತರವು 5 ಅಡಿ 3 ಇಂಚುಗಳಾಗಿವೆ. ದೇಶದ ಜನರ ಬಾಡಿ ಮಾಸ್ ಇಂಡೆಕ್ಸ್ ನಲ್ಲಿನ ಈ ಬದಲಾವಣೆಯ ಹಿಂದಿನ ಕಾರಣವೆಂದರೆ ಜನರು ಸೇವಿಸುವ ಪೌಷ್ಟಿಕ ಆಹಾರ ಎನ್ನಲಾಗಿದೆ.