
ಈ ತುಪ್ಪಕ್ಕೆ ಮಿಕ್ಸ್ ಮಾಡುತ್ತಿದ್ದದ್ದು ಕರಿದ ಎಣ್ಣೆ ಎಂದು ಹೇಳಲಾಗುತ್ತಿದೆ. ಕರಿದು ಉಳಿದ ಎಣ್ಣೆಗೆ ಡಾಲ್ಡಾ ಮಿಕ್ಸ್ ಮಾಡಿ, ಎಸೆನ್ಸ್ ಮಿಶ್ರಣ ಕೊಟ್ಟು ಘಮಘಮಿಸುವ ತುಪ್ಪ ತಯಾರಿಕೆ ಮಾಡಲಾಗುತ್ತಿತ್ತು ಎಂಬುದು ದಾಳಿ ವೇಳೆ ಬಹಿರಂಗವಾಗಿದೆ.
ನಂದಿ ಬ್ರ್ಯಾಂಡ್ ಎಂಬ ಹೆಸರಿನ ಮೇಲೆ ತುಪ್ಪ ದೇಶಾದ್ಯಂತ ಮಾರಾಟವಾಗುತ್ತಿತ್ತು. ಒಂದು ಲೀಟರ್‌ಗೆ 50-60ರೂಪಾಯಿ ಖರ್ಚು ಮಾಡಿ 500 ರಿಂದ 600 ರೂಪಾಯಿಗೆ ತುಪ್ಪವನ್ನು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಪ್ರತಿದಿನ 40 ರಿಂದ 50 ಕೆ.ಜಿಯಷ್ಟು ತುಪ್ಪ ರೆಡಿಯಾಗುತ್ತಿದ್ದು, ಅದನ್ನು ಅಲ್ಲಿಯೇ ಪ್ಯಾಕ್ ಮಾಡಿ ಮಾರಾಟ ಮಾಡಲಾಗುತ್ತಿತ್ತಂತೆ.
ದಾಳಿಯ ವೇಳೆ ಎಣ್ಣೆ, ನಕಲಿ ಸಾಮಗ್ರಿ ಸೇರಿದಂತೆ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಈ ಘಟಕದ ಮಾಲೀಕ ವಿಜಯ್ ಗುಪ್ತಾರನ್ನು ಪೊಲೀಸರು ಬಂದಿಸಿದ್ದಾರೆ. 2003ರಿಂದ ಈ ನಕಲಿ ತುಪ್ಪ ತಯಾರಿಕೆ ನಡೆಯುತ್ತಿದೆ. ಪ್ರತಿ ತಿಂಗಳು ನಕಲಿ ತುಪ್ಪ ಮಾರಾಟದಿಂದ ಖರ್ಚೆಲ್ಲ ತೆಗೆದು 30 ಲಕ್ಷಕ್ಕೂ ಅಧಿಕ ಆದಾಯ ಲಾಭದ ರೂಪದಲ್ಲಿ ಈತನಿಗೆ ಬರುತ್ತಿದೆ ಎನ್ನಲಾಗಿದೆ.