ಕೊರೊನಾ ಸೋಂಕಿನಿಂದಾಗಿ ರಂಗು ಕಳೆದುಕೊಂಡಿದ್ದ ಗೋವಾ ಮತ್ತೆ ಹಳೆ ವೈಭವಕ್ಕೆ ಮರಳುತ್ತಿದೆ. ಕೊರೊನಾ ಸಮಯದಲ್ಲಿ ಐದು ತಿಂಗಳ ಕಾಲ ಬಾಗಿಲು ಮುಚ್ಚಿದ್ದ ಗೋವಾ ಬಾರ್ ಮತ್ತು ರೆಸ್ಟೋರೆಂಟ್ ಗಳು ಈಗ ಬಾಗಿಲು ತೆರೆದಿವೆ.
ಕೇಂದ್ರ ಮಾರ್ಗಸೂಚಿಯಡಿ ಅನ್ಲಾಕ್ 4ರ ಅಡಿಯಲ್ಲಿ ರಾಜ್ಯ ಸರ್ಕಾರ ಬಾರ್, ರೆಸ್ಟೋರೆಂಟ್ ಬಾಗಿಲು ತೆರೆಯಲು ಅನುಮತಿ ನೀಡಿದೆ. ಮಂಗಳವಾರದಿಂದ ಗೋವಾದ ಬಣ್ಣ ನಿಧಾನವಾಗಿ ಬದಲಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಎಲ್ಲ ಬಾರ್ ಗಳು ಬಾಗಿಲು ಮುಚ್ಚಿದ್ದವು. ಅನ್ಲಾಕ್ 3ರವರೆಗೂ ಬಾರ್ ಗಳಲ್ಲಿ ಕುಡಿಯಲು ಅನುಮತಿಯಿರಲಿಲ್ಲ. ಕೇವಲ ಪಾರ್ಸಲ್ ವ್ಯವಸ್ಥೆಗೆ ಮಾತ್ರ ಅನುಮತಿ ನೀಡಲಾಗಿತ್ತು.
ಕೆಲವು ಷರತ್ತುಗಳನ್ನು ಪಾಲಿಸುವಂತೆ ಸರ್ಕಾರ ಸೂಚನೆ ನೀಡಿದೆ. ಪಾಸ್ಕ್ ಕಡ್ಡಾಯವಾಗಲಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಸರ್ಕಾರ ಹೇಳಿದೆ. ಮಾಸ್ಕ್ ಧರಿಸದ ಗ್ರಾಹಕರಿಗೆ ಮದ್ಯ ನೀಡದಂತೆ ಸೂಚಿಸಲಾಗಿದೆ.