ಚೀನಾದ ಉತ್ಪನ್ನಗಳ ಮಾರಾಟದ ಬಗ್ಗೆ ವಿಭಿನ್ನ ಪ್ರತಿಭಟನೆಗಳು ಹೊರಬರುತ್ತಿವೆ. ಗುಜರಾತ್‌ನಲ್ಲಿ ಕೆಲವು ರೀತಿಯ ವಿರೋಧಗಳು ಕಂಡುಬಂದಿವೆ. ಚೀನೀ ಅಪ್ಲಿಕೇಶನ್ ಡಿಲಿಟ್ ಬದಲಿಗೆ 250 ಗ್ರಾಂ ಒಣ ಹಣ್ಣುಗಳನ್ನು ನೀಡಲಾಗುತ್ತಿದೆ.
ಭಾರತ-ಚೀನಾ ಗಡಿಯಲ್ಲಿ ಹಿಂಸಾತ್ಮಕ ಘರ್ಷಣೆಯಲ್ಲಿ 20 ಸೈನಿಕರು ಹುತಾತ್ಮರಾದ ನಂತರ ದೇಶಾದ್ಯಂತ ಚೀನಾದ ಉತ್ಪನ್ನಗಳಿಗೆ ವಿರೋಧ ಪ್ರಾರಂಭವಾಗಿದೆ.
ಗುಜರಾತ್‌ನ ಆನಂದ್ ಜಿಲ್ಲೆಯ ಪೆಟ್‌ಲಾಡ್‌ನಲ್ಲಿ, ಚೀನಾ ಅಪ್ಲಿಕೇಷನ್ ಡಿಲಿಟ್ ಮಾಡಿದ್ರೆ 250 ಗ್ರಾಂ ಒಣ ಹಣ್ಣುಗಳನ್ನು ನೀಡಲಾಗುವುದು ಎಂದು ಖರೀದಿ ಮಾರಾಟ ಸಂಘ ಘೋಷಿಸಿದೆ.
ಖರೀದಿ ವೇಳೆ ಅಪ್ಲಿಕೇಷನ್ ಡಿಲಿಟ್ ಮಾಡಿ ನಂತ್ರ ಡೌನ್ಲೋಡ್ ಮಾಡುವಂತಿಲ್ಲ. ದೇಶಕ್ಕಾಗಿ ಮಾಡ್ತಿರುವ ಕೆಲಸ ಎಂಬುದು ಮಾರಾಟ ಸಂಘದ ಹೇಳಿಕೆ.
ಚೀನಾದ ಜನಪ್ರಿಯ ಅಪ್ಲಿಕೇಶನ್‌ಗಳ ಡೌನ್‌ಲೋಡ್‌ಗಳಲ್ಲಿ ಇಳಿಕೆ ಕಂಡುಬಂದಿದೆ ಎಂದು ಇತ್ತೀಚಿನ ವರದಿಯೊಂದು ಬಹಿರಂಗಪಡಿಸಿದೆ. ಈ ಅಪ್ಲಿಕೇಶನ್‌ಗಳಲ್ಲಿ ಟಿಕ್ ಟಾಕ್, ಬಿಗೊ ಲೈವ್, ಪಬ್‌ಜಿ, ಲೈಕ್, ಹಲೋ ಸೇರಿವೆ. ಚೀನಾದ ನಂತರ ಭಾರತದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಟಿಕ್ ಟಾಕ್, ಏಪ್ರಿಲ್‌ಗೆ ಹೋಲಿಸಿದರೆ ಮೇ ತಿಂಗಳಲ್ಲಿ ಶೇ. 5 ರಷ್ಟು ಕುಸಿತ ಕಂಡಿದೆ.