ಕೊರೊನಾ ಸೋಂಕಿಗೆ ದೇಶಕ್ಕೆ ದೇಶವೇ ನಲುಗುವಂತೆ ಆಗಿದೆ. ಮನುಕುಲವನ್ನೇ ಮಂಡಿಯೂರುವಂತೆ ಮಾಡಿರುವ ಕೊರೊನಾಗೆ ಔಷಧ ಕಂಡು ಹಿಡಿಯುವಲ್ಲಿ ವೈದ್ಯ ತಂಡ ನಿರತವಾಗಿದೆ. ಈ ಬೆನ್ನಲ್ಲೇ ಸಾಕಷ್ಟು ನಿಯಮಗಳನ್ನು ಸರ್ಕಾರ ರೂಪಿಸಿದೆ. ಜೊತೆಗೆ ಪಾರ್ಟಿ ಮಾಡುವುದನ್ನೂ ತಾತ್ಕಾಲಿಕವಾಗಿ ನಿಷೇಧಿಸಿದೆ. ಆದರೆ ಇಲ್ಲೊಬ್ಬ ಜ್ಯುವೆಲರಿ ಶಾಪ್ ಮಾಲೀಕ ಪಾರ್ಟಿ ಮಾಡಿದ್ದಾರೆ.
ಈತ ಪಾರ್ಟಿ ಮಾಡಿ ಮುಗಿಸಿ ಆರಾಮಾಗಿದ್ದರೆ ಯಾರು ಆತಂಕಕ್ಕೆ ಒಳಗಾಗುತ್ತಿದ್ದಿಲ್ಲ. ಆದರೆ ಈತ ಪಾರ್ಟಿಯ ನಂತರ ಅಂದರೆ ನಿನ್ನೆ ಕೊರೊನಾಗೆ ಬಲಿಯಾಗಿದ್ದಾರೆ. ಹೌದು ಈ ಘಟನೆ ನಡೆದಿರೋದು ಹೈದರಾಬಾದ್ ನಲ್ಲಿ. ಹೈದರಾಬಾದ್ನ ಹಿಮಾಯತ್ನಗರದಲ್ಲಿ ಬಹುದೊಡ್ಡ ಆಭರಣ ಮಳಿಗೆಯನ್ನು ಹೊಂದಿರುವ ಈ ಮಾಲೀಕ ಇತ್ತೀಚೆಗೆ ತಮ್ಮ ಬರ್ತಡೇ ಪಾರ್ಟಿ ಮಾಡಿಕೊಂಡಿದ್ದಾರೆ. ಈ ಪಾರ್ಟಿಯಲ್ಲಿ ಜ್ಯುವೆಲರಿ ಅಸೋಸಿಯೇಷನ್ ಸದಸ್ಯರು ಸೇರಿದಂತೆ ನೂರಕ್ಕೂ ಹೆಚ್ಚು ಗಣ್ಯರು ಪಾಲ್ಗೊಂಡಿದ್ದರಂತೆ.
ಆದರೆ ಇದೀಗ ಪಾರ್ಟಿಯಲ್ಲಿ ಪಾಲ್ಗೊಂಡ ಅಷ್ಟು ಮಂದಿಗೆ ಆತಂಕ ಎದುರಾಗಿದೆ. ಏಕೆಂದರೆ ಈ ಪಾರ್ಟಿ ಆಯೋಜಿಸಿದ್ದ ವ್ಯಕ್ತಿ ಶನಿವಾರ ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಅಷ್ಟೆ ಅಲ್ಲ ಈ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಮತ್ತೋರ್ವ ವ್ಯಕ್ತಿ ಕೂಡ ಕೊರೊನಾಗೆ ಬಲಿಯಾಗಿದ್ದಾರೆ. ಹೀಗಾಗಿ ಆತಂಕ ಇನ್ನು ಹೆಚ್ಚಾಗಿದೆ.