ಅಕ್ರಮ ಆಸ್ತಿ ಗಳಿಕೆ ಪ್ರಕರಣದಿಂದ ಜೈಲು ಪಾಲಾಗಿರುವ ತಮಿಳುನಾಡಿನ ಪ್ರಭಾವಿ ನಾಯಕಿ, ಉಚ್ಛಾಟಿತ ಎಐಎಡಿಎಂಕೆ ಮುಖಂಡೆ ಶಶಿಕಲಾ ನಟರಾಜನ್ ಅವಧಿಗೂ ಮುನ್ನ ಬಿಡುಗಡೆಯಾಗುತ್ತಿದ್ದಾರೆ ಎಂಬ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.
ಹೌದು, ಶಶಿಕಲಾ, ಅವರ ಸಾಕು ಮಗ ವಿ.ಎನ್. ಸುಧಾಕರನ್ ಮತ್ತು ಆಪ್ತ ಸಹವರ್ತಿ ಜೆ.ಇಲವರಸಿ ಅವರಿಗೆ ಶಿಕ್ಷೆ ವಿಧಿಸಿ 2017ರ ಫೆಬ್ರುವರಿ 15 ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದಾಗಿನಿಂದ ಎಲ್ಲರೂ ಜೈಲಿನಲ್ಲಿ ಇದ್ದಾರೆ. ಅವರ ಬಿಡುಗಡೆ ದಿನಾಂಕವನ್ನು 2022 ಫೆಬ್ರವರಿ 15 ಕ್ಕೆ ನಿಗದಿಪಡಿಸಲಾಗಿದೆ. ಆದರೆ ಇದೀಗ ಬಿಜೆಪಿ ನಾಯಕ ಆಶೀರ್ವಾದಂ ಆಚಾರಿ ಟ್ವೀಟ್ ಮಾಡಿದ್ದಾರೆ. ಶಶಿಕಲಾ ನಟರಾಜನ್ಗೆ ಆಗಸ್ಟ್ 14 ರಂದು ಬಿಡುಗಡೆ ಭಾಗ್ಯ ಸಿಗುತ್ತಿದೆ ಎಂದು ಹೇಳಿದ್ದು, ಈ ಬೆನ್ನಲ್ಲೇ ಭಾರೀ ಚರ್ಚೆ ಆಗುತ್ತಿದೆ.
ಇನ್ನು ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುವುದರ ಜೊತೆಗೆ ತಮಿಳುನಾಡಿನಲ್ಲಿ ರಾಜಕೀಯ ಚಿತ್ರಣವೇ ಬದಲಾಗುವಂತಿದೆ. ಹೀಗಾಗಿ ಶಶಿಕಲಾ ಬಿಡುಗಡೆ ಚರ್ಚೆ ಸಂಬಂಧ ಜೈಲಾಧಿಕಾರಿಗಳಿಂದ ಕಾರಾಗೃಹ ಡಿಜಿ ಅಲೋಕ್ ಮೋಹನ್ ಮಾಹಿತಿ ಪಡೆದಿದ್ದಾರೆ. ಹಾಗೂ ಈ ವಿಚಾರ ಹೇಗೆ ಹೊರಬಿತ್ತು ಅನ್ನೋದರ ಬಗ್ಗೆ ಮಾಹಿತಿ ಪಡೆದಿದ್ದಾರಂತೆ.