ಗಡಿಯಲ್ಲಿ ಕಾಲು ಕೆರೆದು ಜಗಳವಾಡುವ ಮೂಲಕ ಭಾರತೀಯರನ್ನು ಎದುರು ಹಾಕಿಕೊಂಡಿರುವ ಚೀನಾಗೆ ಭಾರತೀಯರು ಸರಿಯಾಗಿ ಬುದ್ದಿ ಕಲಿಸುತ್ತಿದ್ದಾರೆ. ಸರ್ಕಾರ ಕೂಡ ಚೀನಾದ ನರಿ ಬುದ್ದಿಗೆ ಮತ್ತೊಮ್ಮೆ ಪೆಟ್ಟು ನೀಡುವ ಮೂಲಕ ಬುದ್ದಿ ಕಲಿಸಿದೆ.
ಹೌದು, ಚೀನಾ ಕಂಪನಿಗಳಿಗೆ ಭಾರತ ಸರಿಯಾಗಿ ಬುದ್ದಿ ಕಲಿಸಿದೆ. ಗಂಗಾ ನದಿಯಲ್ಲಿರುವ ಮಹಾತ್ಮ ಗಾಂಧಿ ಸೇತುಗೆ ಸಮಾನಾಂತರವಾಗಿ ಮಾಡಬೇಕಾದ ಮಹಾಸೇತು ಯೋಜನೆಗೆ ಸಂಬಂಧಿಸಿದ ಟೆಂಡರ್ ಅನ್ನು ಕೇಂದ್ರ ಸರ್ಕಾರ ರದ್ದುಗೊಳಿಸುವ ಮೂಲಕ ಮತ್ತೊಮ್ಮೆ ಪೆಟ್ಟು ನೀಡಿದೆ. ಈ ಕಾಮಗಾರಿಗೆ ಸಂಬಂಧಿಸಿದಂತೆ ಟೆಂಡರ್ ಕರೆಯಲಾಗಿತ್ತು. ಈ ಟೆಂಡರ್ ಪಡೆದ ನಾಲ್ಕು ಗುತ್ತಿಗೆದಾರರಲ್ಲಿ ಎರಡು ಚೀನಾ ಕಂಪನಿ ಇದ್ದಿದ್ದರಿಂದ ಟೆಂಡರನ್ನೇ ರದ್ದುಗೊಳಿಸಿದೆ ಸರ್ಕಾರ.
ಸುಮಾರು 2900 ಕೋಟಿ ರೂ. ವೆಚ್ಚದ ಕಾಮಗಾರಿ ಇದಾಗಿದ್ದು, 5.6 ಕಿ.ಮೀ ಉದ್ದದ ಮುಖ್ಯ ಸೇತುವೆ ಹಾಗೂ ಚಿಕ್ಕ ಸೇತುವೆಗಳು, ಅಂಡರ್‌ಪಾಸ್‌ಗಳು ಮತ್ತು ರೈಲು ಓವರ್‌ಪಾಸ್‌ಗಳನ್ನು ಕಾಮಗಾರಿ ಒಳಗೊಂಡಿತ್ತು. ಮೂರು ವರ್ಷದಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು.