ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ಈಗಾಗಲೇ ಸಾವಿರಾರು ಮಂದಿಯನ್ನು ಬಲಿ ಪಡೆದಿದೆ. ಲಕ್ಷಾಂತರ ಮಂದಿ ಸೋಂಕು ಪೀಡಿತರಾಗಿದ್ದು, ಇವರುಗಳಿಗೆ ಸರ್ಕಾರಿ ಆಸ್ಪತ್ರೆ ಜೊತೆ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆಗೆ ಅನುವು ಮಾಡಿಕೊಡಲಾಗಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಚಿಕಿತ್ಸಾ ವೆಚ್ಚ ವಿಧಿಸಲಾಗುತ್ತಿದೆ ಎಂಬ ಮಾತುಗಳ ಮಧ್ಯೆ ದೇಶದಲ್ಲಿ ಆರೋಗ್ಯ ವಿಮೆ ಪಡೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿತ್ತು. ಇದೀಗ ದೇಶದ ಅತಿ ದೊಡ್ಡ ಚಿನ್ನದ ಸಾಲ ನೀಡುವ ಬ್ಯಾಂಕೇತರ ಹಣಕಾಸು ಸಂಸ್ಥೆ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಮುತ್ತೂಟ್ ಫೈನಾನ್ಸ್ ಕೊರೊನಾ ವಿಮೆ ಕುರಿತು ಖುಷಿ ಸುದ್ದಿಯೊಂದನ್ನು ನೀಡಿದೆ.
ಎಂ.ಎಸ್.ಎಲ್. ಯೋಜನೆಯಡಿ ಚಿನ್ನದ ಸಾಲ ಪಡೆಯುವ ಗ್ರಾಹಕರಿಗೆ ಮುತ್ತೂಟ್ ಫೈನಾನ್ಸ್, ಒಂದು ಲಕ್ಷ ರೂ. ಮೌಲ್ಯದ ಕೊರೊನಾ ವಿಮಾ ಸುರಕ್ಷೆ ನೀಡಲಿದ್ದು,ಇದಕ್ಕಾಗಿ ಕೋಟಕ್ ಮಹಿಂದ್ರಾ ಜನರಲ್ ಇನ್ಶೂರೆನ್ಸ್ ಕಂಪನಿ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರ ಜೊತೆಗೆ ಈ ಸ್ಕೀಮ್ ನಡಿ ಪ್ರತಿ ಗ್ರಾಂ ಚಿನ್ನಕ್ಕೆ ಹೆಚ್ಚಿನ ಸಾಲ ಮೊತ್ತವನ್ನು ಸಹ ನೀಡಲಾಗುತ್ತದೆ.