ಕೊರೊನಾ ಲಾಕ್ ಡೌನ್ ಬಳಿಕ ದೇಶ ಈಗ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಲಾಕ್ ಡೌನ್ ನಲ್ಲಿ ಬಹಳಷ್ಟು ಸಡಿಲಿಕೆಗಳನ್ನು ಮಾಡಿದ್ದು, ಹೀಗಾಗಿ ಪ್ರವಾಸೋದ್ಯಮ ಸೇರಿದಂತೆ ಬಹುತೇಕ ಚಟುವಟಿಕೆಗಳು ಆರಂಭವಾಗಿವೆ.
ನೆರೆ ರಾಜ್ಯ ಗೋವಾ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿದ್ದು, ಅಲ್ಲಿಗೆ ತೆರಳಲು ಬಯಸುವವರು ತಪ್ಪದೇ ಈ ಸುದ್ದಿಯನ್ನು ಓದಬೇಕಿದೆ. ಕೊರೊನಾ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ತನ್ನ ರಾಜ್ಯಕ್ಕೆ ಬರುವ ಪ್ರತಿಯೊಬ್ಬರಿಗೂ ಕೊರೊನಾ ಟೆಸ್ಟ್ ಕಡ್ಡಾಯಗೊಳಿಸಿದ್ದು, ಇದಕ್ಕಾಗಿ 2 ಸಾವಿರ ರೂಪಾಯಿ ಶುಲ್ಕ ನಿಗದಿಪಡಿಸಿದೆ.
ಪರೀಕ್ಷೆಯ ವೇಳೆ ಕೊರೊನಾ ಲಕ್ಷಣ ಕಂಡು ಬಂದರೆ ಅಂಥವರು ಹದಿನಾಲ್ಕು ದಿನಗಳ ಕಾಲ ಕ್ವಾರಂಟೈನ್ ಇರಬೇಕಿದೆ. ಆದರೆ ಕೊರೋನಾ ಪರೀಕ್ಷೆಗೆ ಶುಲ್ಕ ನಿಗದಿಪಡಿಸಿರುವುದಕ್ಕೆ ಅಪಸ್ವರ ಕೇಳಿ ಬಂದಿದೆ. ಕರ್ನಾಟಕದಲ್ಲಿ ಈ ಪರೀಕ್ಷೆ ಉಚಿತವಾಗಿದ್ದು, ಆದರೆ ಕರ್ನಾಟಕದಿಂದ ಗೋವಾಗೆ ವಲಸೆ ಹೋಗುವ ಕಾರ್ಮಿಕರಿಗೆ ಈ ಶುಲ್ಕ ದುಬಾರಿಯಾಗಿ ಪರಿಣಮಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.