ಅಪಘಾತ ಪ್ರಕರಣಗಳಲ್ಲಿ ಪರಿಹಾರ ನೀಡುವ ವೇಳೆ ವ್ಯಕ್ತಿ ಹೊಂದಿರುವ ಉದ್ಯೋಗ, ಅವರುಗಳ ಗಳಿಕೆ ಮೊದಲಾದ ಅಂಶಗಳನ್ನು ಪರಿಗಣಿಸಲಾಗುತ್ತದೆ. ಇದರ ಮಧ್ಯೆ ಮನೆಯಲ್ಲಿ ಕಾರ್ಯ ನಿರ್ವಹಿಸುವ ಗೃಹಿಣಿಯರ ವಿಚಾರಕ್ಕೆ ಸಂಬಂಧಪಟ್ಟಂತೆ ಇದೀಗ ಮದ್ರಾಸ್ ಹೈಕೋರ್ಟ್ ಮಹತ್ವದ ಹೇಳಿಕೆ ನೀಡಿದೆ.
ಹೌದು, ಅಪಘಾತವೊಂದರಲ್ಲಿ ಶೇಕಡ 60ರಷ್ಟು ಅಂಗವೈಕಲ್ಯಕ್ಕೆ ತುತ್ತಾಗಿದ್ದ ಮಹಿಳೆಯೊಬ್ಬರು ಹೆಚ್ಚಿನ ಪರಿಹಾರ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ, ಸಮಯದ ಮಿತಿ ಇಲ್ಲದೆ ಕೆಲಸ ಮಾಡುವ ಗೃಹಿಣಿಯರ ಸ್ಥಾನ ದೊಡ್ಡದು ಎಂದು ಹೇಳಿರುವ ಮದ್ರಾಸ್ ಹೈಕೋರ್ಟ್, ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ಹೆಚ್ಚಿನ ಪರಿಹಾರ ಒದಗಿಸಲು ಆದೇಶಿಸಿದೆ.
ಮಹಿಳೆಯರು ಯಾವುದೇ ಸಮಯದ ಮಿತಿ ಇಲ್ಲದೆ ಮನೆಯಲ್ಲಿ ತಮ್ಮ ಕಾರ್ಯ ನಿರ್ವಹಿಸುತ್ತಾರೆ. ಇದನ್ನು ಸಾಮಾನ್ಯ ಉದ್ಯೋಗಿಯಿಂದ ನಿರೀಕ್ಷಿಸಲಾಗದು ಎಂದು ಹೇಳಿರುವ ನ್ಯಾಯಪೀಠ, ಗೃಹಿಣಿಯಾಗಿರುವ ಅರ್ಜಿದಾರ ಮಹಿಳೆಯ ಮನವಿಯನ್ನು ಪುರಸ್ಕರಿಸಿ ಹೆಚ್ಚಿನ ಪರಿಹಾರ ನೀಡಲು ಸೂಚಿಸುತ್ತದೆ ಎಂದು ನ್ಯಾಯಪೀಠ ಹೇಳಿದೆ.