ಕೇರಳದ ಮಲಪ್ಪುರಂನಲ್ಲಿ ಗರ್ಭಿಣಿ ಆನೆಯೊಂದು ಸಿಡಿಮದ್ದು ತುಂಬಿಸಿಟ್ಟಿದ್ದ ಅನಾನಸ್ ಹಣ್ಣು ತಿಂದು ಸಾವನ್ನಪ್ಪಿದ ಘಟನೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಸೆಲೆಬ್ರಿಟಿಗಳಿಂದ ಹಿಡಿದು ಶ್ರೀಸಾಮಾನ್ಯನವರೆಗೆ ಎಲ್ಲರೂ ತೀವ್ರವಾಗಿ ಖಂಡಿಸಿದ್ದರು.
ಇದೀಗ ಈ ಕುರಿತು ಪ್ರಾಥಮಿಕ ತನಿಖಾ ವರದಿ ಹೊರಬಿದ್ದಿದ್ದು, ಆಕಸ್ಮಿಕವಾಗಿ ಸಿಡಿಮದ್ದು ತುಂಬಿಸಿಟ್ಟಿದ್ದ ಹಣ್ಣು ತಿಂದು ಆನೆ ಮೃತಪಟ್ಟಿರಬಹುದೆಂದು ಕೇಂದ್ರ ಪರಿಸರ ಸಚಿವಾಲಯ ತಿಳಿಸಿದೆ.
ಕಾಡುಪ್ರಾಣಿಗಳು ತೋಟಕ್ಕೆ ನುಗ್ಗಿ ಫಸಲು ಹಾಳು ಮಾಡಬಾರದೆಂಬ ಕಾರಣಕ್ಕೆ ಈ ಭಾಗದ ಸ್ಥಳೀಯರು ಹಣ್ಣಿನಲ್ಲಿ ಸಿಡಿಮದ್ದು ತುಂಬಿಡುವುದು ಸಾಮಾನ್ಯವಾಗಿದೆ ಎಂದು ತಿಳಿಸಲಾಗಿದ್ದು, ಇಂತಹ ಹಣ್ಣು ತಿಂದು 15 ವರ್ಷದ ಗರ್ಭಿಣಿ ಆನೆ ಮೃತಪಟ್ಟಿರಬಹುದೆಂದು ಹೇಳಲಾಗಿದೆ.