ಗುಜರಾತ್ ನಲ್ಲಿ ದಿನ ದಿನಕ್ಕೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಇದನ್ನು ಗಮನಿಸಿದ ರಾಜ್ಯ ಸರ್ಕಾರ ಜನರಿಗೆ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಗುಜರಾತ್ ಸರ್ಕಾರ ಕೊರೊನಾ ಪರೀಕ್ಷಾ ಶುಲ್ಕವನ್ನು 1000 ರೂಪಾಯಿ ಕಡಿಮೆ ಮಾಡಿದೆ. ಖಾಸಗಿ ಲ್ಯಾಬ್ ನಲ್ಲಿ ಕೊರೊನಾ ಪರೀಕ್ಷೆಗೆ 1500 ರೂಪಾಯಿ ಪಾವತಿಸಬೇಕು.
ಈ ಹಿಂದೆ ಸರ್ಕಾರಿ ಆಸ್ಪತ್ರೆಯಲ್ಲಿ ಮಾತ್ರ ಕೊರೊನಾ ಪರೀಕ್ಷೆ ನಡೆಯುತ್ತಿತ್ತು. ಸೋಂಕಿತರ ಸಂಖ್ಯೆ ಹೆಚ್ಚಾದ ಕಾರಣ ಕೆಲ ಖಾಸಗಿ ಲ್ಯಾಬ್ ಗಳಿಗೆ ಪರೀಕ್ಷೆ ಮಾಡಲು ಅವಕಾಶ ನೀಡಲಾಗಿದೆ. ಸರ್ಕಾರಿ ಲ್ಯಾಬ್ ನಲ್ಲಿ ಈಗ್ಲೂ ಉಚಿತವಾಗಿಯೇ ಪರೀಕ್ಷೆ ನಡೆಯಲಿದೆ. ಖಾಸಗಿ ಲ್ಯಾಬ್ ನಲ್ಲಿ ಪರೀಕ್ಷೆ ಮಾಡಿದ್ರೆ 1500 ರೂಪಾಯಿ ಪಾವತಿಸಬೇಕು. ಮನೆಯಲ್ಲಿ ಪರೀಕ್ಷೆ ಮಾಡಿಸಿಕೊಂಡ್ರೆ 2000 ರೂಪಾಯಿ ಪಾವತಿಸಬೇಕು.
ಗುಜರಾತಿನಲ್ಲಿ ಇಂದು 1364 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. 1447 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಬುಧವಾರ ಒಂದೇ ದಿನ 85,153 ಮಂದಿ ಪರೀಕ್ಷೆ ಮಾಡಿಸಿಕೊಂಡಿದ್ದಾರೆಂದು ಸರ್ಕಾರ ಹೇಳಿದೆ.