ಜಮ್ಮುವಿನಲ್ಲಿ ಪತಿ-ಪತ್ನಿ ಜಗಳ ಹತ್ಯೆಯಲ್ಲಿ ಅಂತ್ಯ ಕಂಡಿದೆ. ಮನೋಜ್ ಕುಮಾರ್ ಎಂಬಾತನನ್ನು ಪತ್ನಿ ಹತ್ಯೆ ಮಾಡಿದ್ದಾಳೆ. ಮನೋಜ್ ಪ್ರತಿ ದಿನ ಕುಡಿದು ಬಂದು ಪತ್ನಿಗೆ ಹೊಡೆಯುತ್ತಿದ್ದ ಎನ್ನಲಾಗಿದೆ.
ಘಟನೆ ನಡೆದ ದಿನವೂ ಮನೋಜ್ ಕುಡಿದು ಬಂದಿದ್ದನಂತೆ. ಪತ್ನಿ ಜೊತೆ ಜಗಳ ಶುರು ಮಾಡಿದ ಮನೋಜ್ ಹೊಡೆಯಲು ಶುರು ಮಾಡಿದ್ದಾನೆ. ಕೋಪಗೊಂಡ ಪತ್ನಿ, ಪತಿ ಖಾಸಗಿ ಅಂಗಕ್ಕೆ ಹೊಡೆದಿದ್ದಾಳೆ. ನೋವಿನಿಂದ ಬಳಲಿದ ಮನೋಜ್ ಪ್ರಜ್ಞೆ ತಪ್ಪಿದೆ.
ಕೆಲ ಸಮಯದ ನಂತ್ರ ಪ್ರಜ್ಞೆ ಬಂದಿದ್ದು, ಮನೋಜ್ ಮತ್ತೆ ಪತ್ನಿಗೆ ಹೊಡೆಯಲು ಶುರು ಮಾಡಿದ್ದಾನೆ. ಇದ್ರಿಂದ ಕೋಪಗೊಂಡ ಪತ್ನಿ ಪಾತ್ರೆಯಿಂದ ತಲೆಗೆ ಹೊಡೆದಿದ್ದಾಳೆ. ರಾತ್ರಿ ಪತಿ ಸಾವನ್ನಪ್ಪಿದ್ದಾನೆ. ಪತಿ ಶವವನ್ನು ಪತ್ನಿ ಬಾತ್ ರೂಮಿನಲ್ಲಿ ಬಚ್ಚಿಟ್ಟಿದ್ದಳಂತೆ. ಬೆಳಿಗ್ಗೆ ಮನೋಜ್ ಕಾರ್ಖಾನೆಗೆ ಬರಲಿಲ್ಲ ಎನ್ನುವ ಕಾರಣಕ್ಕೆ ಸಹೋದ್ಯೋಗಿ ಮನೆಗೆ ಬಂದಿದ್ದಾನೆ. ಆಗ ಸತ್ಯ ಹೊರ ಬಿದ್ದಿದೆ. ಪೊಲೀಸ್ ವಿಚಾರಣೆ ವೇಳೆ ಮಹಿಳೆ ಪತಿ ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ.