ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣದ ಪ್ರಮುಖ ಆರೋಪಿ ವಿರೇನ್ ಖನ್ನಾನನ್ನು ಇನ್ನೆರಡು ದಿನಗಳಲ್ಲಿ ನಾರ್ಕೋ ಟೆಸ್ಟ್ ಗೆ ಒಳಪಡಿಸಲು ಸಿಸಿಬಿ ಸಿದ್ಧತೆ ನಡೆಸಿದೆ.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೇನ್ ಖನ್ನಾ ಸಧ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಬಾಡಿ ವಾರೆಂಟ್ ಪಡೆದು ಸಿಸಿಬಿ ನಾರ್ಕೋ ಟೆಸ್ಟ್ ಗೆ ಅಹಮದಾಬಾದ್ ಗೆ ಕರೆದೊಯ್ಯಲಿದೆ. ಆರೋಪಿ ಖನ್ನಾ ಎಷ್ಟೇ ವಿಚಾರಣೆ ನಡೆಸಿದರೂ ಇದುವರೆಗೂ ಯಾವುದೇ ಮಾಹಿತಿ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಾರ್ಕೋ ಟೆಸ್ಟ್ ಗೆ ಸಿಸಿಬಿ ಮುಂದಾಗಿದೆ.
ಇನ್ನು ವಿರೇನ್ ಖನ್ನಾ ಮೊಬೈಲ್ ನಲ್ಲಿ ಡ್ರಗ್ಸ್ ಕುರಿತು ಸ್ಫೋಟಕ ಮಾಹಿತಿಗಳು ಸಿಸಿಬಿಗೆ ಲಭ್ಯವಾಗಿವೆ. 262 ಮಾದರಿಯ ಡ್ರಗ್ಸ್ ಡೀಟೇಲ್ ಗಳನ್ನು ಖನ್ನಾ ತಿಳಿದುಕೊಂಡಿದ್ದ. ಎಲ್ಲಾ ರೀತಿಯ ಡ್ರಗ್ಸ್ ಮಾದರಿ, ಅವುಗಳ ಸೇವನೆ ಹಾಗೂ ಪರಿಣಾಮಗಳ ಬಗ್ಗೆಯೂ ಆತನ ಮೊಬೈಲ್ ನಲ್ಲಿ ಮಾಹಿತಿ ಸಿಕ್ಕಿದೆ. ಆದರೆ ಖನ್ನಾ ಮಾತ್ರ ಏನನ್ನೂ ಬಾಯ್ಬಿಡುತ್ತಿಲ್ಲ ಎನ್ನಲಾಗಿದೆ.