ನವದೆಹಲಿ: ದೇಶಾದ್ಯಂತ ಮಹಾಮಾರಿ ಕೊರೊನಾ ತಡೆಗೆ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಗಿದೆ. ಆದರೆ ವ್ಯಾಕ್ಸಿನ್ ಪಡೆದ ಹಲವರಲ್ಲಿ ಅಡ್ಡ ಪರಿಣಾಮವುಂಟಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.
ಜನವರಿ 16 ರಿಂದ ಆರಂಭವಾಗಿರುವ ಕೊರೊನಾ ಲಸಿಕೆ ಅಭಿಯಾನದಲ್ಲಿ ಈವರೆಗೆ 3,81,305 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ. ಇವರಲ್ಲಿ 580 ಜನರಲ್ಲಿ ಸೈಡ್ ಎಫೆಕ್ಟ್ ಕಂಡು ಬಂದಿದೆ.
ನಿನ್ನೆಯೊಂದೇ ದಿನ ದೇಶಾದ್ಯಂತ 1,48,266 ಲಕ್ಷ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆದಿದ್ದು, ಅವರಲ್ಲಿ 133 ಜನರಿಗೆ ಅಡ್ಡಪರಿಣಾಮವುಂಟಾಗಿದೆ. ಈ ಹಿನ್ನೆಲೆಯಲ್ಲಿ ಲಸಿಕೆ ಪಡೆಯಲು ಹಲವರು ಹಿಂಜರಿಯುತ್ತಿದ್ದಾರೆ.