alex Certify ‘ಕೊರೊನಾ’ ಸೋಂಕು ನಿಷ್ಕ್ರಿಯ ಕುರಿತಂತೆ ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕೊರೊನಾ’ ಸೋಂಕು ನಿಷ್ಕ್ರಿಯ ಕುರಿತಂತೆ ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ವಿಶ್ವದ ಜನತೆಯನ್ನು ಕಂಗೆಡಿಸಿರುವ ಕೊರೊನಾ ಮಹಾಮಾರಿ ಇಷ್ಟು ದಿನಗಳಾದರೂ ಕಡಿಮೆಯಾಗುತ್ತಿಲ್ಲ.ಈ ಮಾರಣಾಂತಿಕ ಸೋಂಕಿಗೆ ಲಸಿಕೆ ಕಂಡು ಹಿಡಿಯಲು ಎಲ್ಲ ರಾಷ್ಟ್ರಗಳು ನಿರಂತರವಾಗಿ ಪ್ರಯತ್ನ ನಡೆಸಿದ್ದು, ಈ ನಿಟ್ಟಿನಲ್ಲಿ ರಷ್ಯಾ ಒಂದಷ್ಟು ಯಶಸ್ಸು ಸಾಧಿಸಿದೆ ಎಂದು ಹೇಳಲಾಗುತ್ತಿದೆ.

ಕೊರೊನಾ ಸೋಂಕು ತಗುಲದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಕೆ ಸೇರಿದಂತೆ ಹಲವು ಕ್ರಮಗಳನ್ನು ಸೂಚಿಸಲಾಗಿದೆ. ಜೊತೆಗೆ ಅನಿವಾರ್ಯವಾದ ಹೊರತು ಮನೆಯಿಂದ ಹೊರಗೆ ಬರಬಾರದೆಂದು ಸಲಹೆ ನೀಡಲಾಗಿದೆ.

ಇದರ ಮಧ್ಯೆ ಮುಂಬೈನ ಸೆವೆನ್ ಹಿಲ್ಸ್ ಆಸ್ಪತ್ರೆಯ ವೈದ್ಯರ ತಂಡ ನಡೆಸಿದ ಅಧ್ಯಯನವೊಂದರಲ್ಲಿ ಕೊರೊನಾ ಸೋಂಕು ನಿಷ್ಕ್ರಿಯಗೊಳಿಸುವ ಕುರಿತು ಮಹತ್ವದ ಮಾಹಿತಿಯೊಂದು ಬಹಿರಂಗವಾಗಿದೆ. ನಿತ್ಯವೂ ಮೂಗಿನ ಮೂಲಕ ಆವಿ (ಸ್ಟೀಂ) ತೆಗೆದುಕೊಳ್ಳುವುದರಿಂದ ಸೋಂಕನ್ನು ನಿಷ್ಕ್ರಿಯಗೊಳಿಸಬಹುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...