ವಿಶ್ವವನ್ನೇ ತಲ್ಲಣಗೊಳಿಸಿದ ಕೊರೊನಾ ವೈರಸ್ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಅತೀ ಅಗತ್ಯ. ಈ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸತುವು ತುಂಬಾ ಸಹಕಾರಿಯಾಗಿದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಆದಕಾರಣ ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಈ ಆಹಾರವನ್ನು ಸೇವಿಸಿ.
ನೆಲಗಡಲೆ: ನೆಲಗಡಲೆಯಲ್ಲಿ ಸತುವು ಹೇರಳವಾಗಿದೆ. ಇದನ್ನು ನೀವು ಪ್ರತಿನಿತ್ಯ ಸೇವಿಸುವುದರಿಂದ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಕಡಲೆ: ಇದು ಫೈಬರ್, ಆ್ಯಕ್ಸಿಆಕ್ಸಿಡೆಂಟ್ ಹಾಗೂ ಇತರ ಪೋಷಕಾಂಶಗಳನ್ನು ಒಳಗೊಂಡಿದೆ. ಇದನ್ನು ಸೇವಿಸುವುದರಿಂದ ನಿಮಗೆ ಕೊರೊನಾ ಸೋಂಕಿನ ವಿರುದ್ಧ ಹೋರಾಡುವ ಶಕ್ತಿ ದೊರೆಯುತ್ತದೆ.
ಮೊಟ್ಟೆಯಲ್ಲಿ ಕೂಡ ಸತುವು ಇರುತ್ತದೆ. ಹಾಗೆ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅಗತ್ಯವಾದ ಫೋಷಕಾಂಶಗಳು ಇದರಲ್ಲಿದೆ. ಆದಕಾರಣ ಪ್ರತಿದಿನ ಮೊಟ್ಟೆಯನ್ನು ಸೇವಿಸಿ.