ಮಾರಣಾಂತಿಕ ರೋಗ ಕೊರೊನಾಗೆ ತಾವು ಔಷಧ ಕಂಡು ಹಿಡಿದಿರುವುದಾಗಿ ಯೋಗಗುರು ಬಾಬಾ ರಾಮದೇವ್ ಮುಖ್ಯಸ್ಥರಾಗಿರುವ ಪತಂಜಲಿ ಸಂಸ್ಥೆ ಹೇಳಿಕೊಂಡಿತ್ತಲ್ಲದೇ ಈ ಔಷಧ ಕೊರೊನಾ ಸೋಂಕಿತರನ್ನು ಸಂಪೂರ್ಣವಾಗಿ ಗುಣ ಮಾಡುತ್ತದೆ ಎಂದು ತಿಳಿಸಿತ್ತು.
ಈ ವಿಚಾರದ ಕುರಿತು ಚರ್ಚೆ ನಡೆಯುತ್ತಿರುವ ಮಧ್ಯೆ ಆಯುಷ್ ಇಲಾಖೆ, ಔಷಧದ ಕ್ಲಿನಿಕಲ್ ಟ್ರಯಲ್ ವರದಿಯನ್ನು ಕಳುಹಿಸಿಕೊಡುವಂತೆ ಸೂಚಿಸಿದ್ದಲ್ಲದೆ ಅಲ್ಲಿಯವರೆಗೆ ಯಾವುದೇ ಜಾಹೀರಾತು ನೀಡದಂತೆ ಪತಂಜಲಿ ಸಂಸ್ಥೆಗೆ ಆದೇಶಿಸಿತ್ತು.
ಇದರ ಮಧ್ಯೆ ಕೊರೊನಾ ಸೋಂಕಿತರಿಗೆ ಪತಂಜಲಿ ಆಯುರ್ವೇದ ಔಷಧ ನೀಡಲು ಅನುಮತಿ ನೀಡಿದ್ದಕ್ಕೆ ಜೈಪುರದ ನಿಮ್ಸ್ ಆಸ್ಪತ್ರೆಯೂ ಈಗ ಸಂಕಷ್ಟಕ್ಕೆ ಸಿಲುಕಿದೆ. ಮೂರು ದಿನಗಳಲ್ಲಿ ಈ ಕುರಿತು ವಿವರಣೆ ನೀಡುವಂತೆ ರಾಜಸ್ಥಾನ ಆರೋಗ್ಯ ಇಲಾಖೆ ಆಸ್ಪತ್ರೆಗೆ ನೋಟಿಸ್ ನೀಡಿದೆ.