ಕೊರೊನಾ ವೈರಸ್ ವಿರುದ್ಧ ಹೋರಾಡೋದಿಕ್ಕೆ ಮುಖ್ಯವಾಗಿ ಬೇಕಾದದ್ದು ರೋಗ ನಿರೋಧಕ ಶಕ್ತಿ ಅನ್ನೋದು ಗೊತ್ತಿರುವ ವಿಚಾರ. ಯಾರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆಯೋ ಅಂತವರು ಈ ವೈರಸ್‌ಗೆ ತುತ್ತಾಗುತ್ತಾರೆ. ಹೀಗಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಮುಖ್ಯವಾಗಿದೆ. ಇದರ ಜೊತೆಗೆ ಕೊರೊನಾ ಸೋಂಕಿತರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಪ್ಲಾಸ್ಮಾ ಥೆರಪಿಯನ್ನು ಮಾಡಲಾಗುತ್ತಿತ್ತು. ಆದರೆ ಇದು ಅಷ್ಟು ಪರಿಣಾಮಕಾರಿಯಲ್ಲ ಎಂದು ಹೇಳಲಾಗುತ್ತಿದೆ.
ಹೌದು, ಕೊರೊನಾ ಚಿಕಿತ್ಸೆಗೆ ಸಂಬಂಧಿಸಿದ ಮಾರ್ಗಸೂಚಿಯಲ್ಲಿ ಪ್ಲಾಸ್ಮಾ ಥೆರಪಿ ಕೂಡ ಇದೆ. ಆದರೆ ಇದನ್ನು ಮಾರ್ಗಸೂಚಿಯಿಂದ ಕೈ ಬಿಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ರಾಷ್ಟ್ರೀಯ ಕಾರ್ಯಪಡೆ ಹಾಗೂ ಜಂಟಿ ನಿರ್ವಹಣ ತಂಡದ ಜೊತೆ ಐಸಿಎಂಆರ್ ಚರ್ಚೆ ನಡೆಸುತ್ತಿದೆ. ಈ ಚರ್ಚೆಯಲ್ಲಿ ಇದರ ಸಾಧಕ ಭಾದಕಗಳ ಬಗ್ಗೆಯೂ ಮಾತುಕತೆಯಾಗುತ್ತಿದೆ.
ಪ್ಲಾಸ್ಮಾ ಥೆರಪಿ ಸೋಂಕಿತರನ್ನು ಗುಣಮಾಡುವಲ್ಲಿ ಅಷ್ಟಾಗಿ ಪರಿಣಾಮ ಹೊಂದಿಲ್ಲ. ಈ ಚಿಕಿತ್ಸೆಯಿಂದ ಸೋಂಕಿನ ತೀವ್ರತೆಯೂ ಕಡಿಮೆಯಾಗಿಲ್ಲ ಎಂಬ ಅಭಿಪ್ರಾಯಗಳು ಬಂದಿವೆ. ಇದರಿಂದ ಸೋಂಕಿತರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬುದು ಸಾಬೀತಾಗಿಲ್ಲ ಎನ್ನಲಾಗಿದೆ. ಹೀಗಾಗಿ ಚಿಕಿತ್ಸೆ ಮಾರ್ಗಸೂಚಿಯಿಂದ ಇದನ್ನು ಕೈಬಿಡಲು ಕೇಂದ್ರ ಚಿಂತನೆ ನಡೆಸಿದೆ.