ದೇಶದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗಿದೆ. ದೇಶದಲ್ಲಿ 24 ಗಂಟೆಯಲ್ಲಿ 20,903 ಹೊಸ ಪ್ರಕರಣ ಬೆಳಕಿಗೆ ಬಂದಿದೆ. 379 ಮಂದಿ 24 ಗಂಟೆಯಲ್ಲಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಒಟ್ಟು 6,25,544 ಮಂದಿಗೆ ಸೋಂಕು ತಗುಲಿದೆ. ಸದ್ಯ 2,27,438 ಸಕ್ರಿಯ ಪ್ರಕರಣವಿದೆ.
ಕೊರೊನಾ ವೈರಸ್ ಸೋಂಕಿನ ಒಟ್ಟು ಪ್ರಕರಣಗಳಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಸಕ್ರಿಯ ಪ್ರಕರಣದ ಮಟ್ಟವು ಈಗ ಮೂರನೇ ಸ್ಥಾನವನ್ನು ತಲುಪಿದೆ. ಒಟ್ಟು ಕೊರೊನಾ ವೈರಸ್ ಸೋಂಕಿನ ವಿಷ್ಯಕ್ಕೆ ಬಂದ್ರೆ 28,37,189 ಪ್ರಕರಣಗಳಲ್ಲಿ ಅಮೆರಿಕಾ ಮೊದಲ ಸ್ಥಾನದಲ್ಲಿದೆ. 15,14,613 ಸಕ್ರಿಯ ಪ್ರಕರಣಗಳಲ್ಲಿ ಯುಎಸ್ ಮೊದಲ ಸ್ಥಾನದಲ್ಲಿದೆ. ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ. ಒಟ್ಟು ಪ್ರಕರಣಗಳು 15,01,353 ಪ್ರಕರಣವಿದ್ದು, ಸಕ್ರಿಯ ಪ್ರಕರಣಗಳು 5,23,216.
ರಷ್ಯಾ 6,61,165 ಪ್ರಕರಣಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಸಕ್ರಿಯ ಪ್ರಕರಣದ ವಿಷ್ಯದಲ್ಲಿ ಭಾರತ ರಷ್ಯಾವನ್ನು ಹಿಂದಿಕ್ಕಿದೆ. ರಷ್ಯಾದಲ್ಲಿ 2,22,504 ಸಕ್ರಿಯ ಪ್ರಕರಣಗಳಿದ್ದು, ಭಾರತದಲ್ಲಿ ಈ ಸಂಖ್ಯೆ 2,27,439 ಕ್ಕೆ ಏರಿದೆ.