ಕೊರೊನಾ ಕಾರಣಕ್ಕೆ ಈಗಾಗಲೇ ಆರ್ಥಿಕತೆ ಹೊಡೆತಕ್ಕೆ ತತ್ತರಿಸಿಹೋಗಿರುವ ಜನಸಾಮಾನ್ಯರಿಗೆ ಸದ್ಯದಲ್ಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವ ಮೂಲಕ ಮತ್ತೊಂದು ಶಾಕ್ ಎದುರಾಗುವ ಸಾಧ್ಯತೆ ಇದೆ.
ಹೌದು, ತೈಲ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವ ಕಾರಣ ಸರಕು ಸಾಗಣೆ ವೆಚ್ಚ ಶೇಕಡಾ 20 ರಷ್ಟು ಹೆಚ್ಚಳ ಮಾಡಲು ಅಖಿಲ ಭಾರತ ಮೋಟರ್ ಸಾರಿಗೆ ಕಾಂಗ್ರೆಸ್ ತೀರ್ಮಾನಿಸಿದ್ದು, ಸದ್ಯದಲ್ಲೇ ಈ ಕುರಿತು ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ.
ಸರಕು ಸಾಗಣೆ ವೆಚ್ಚ ಹೆಚ್ಚಳವಾದರೆ ಇದು ಅಗತ್ಯ ವಸ್ತುಗಳ ಮೇಲೆ ನೇರ ಪರಿಣಾಮ ಬೀರಲಿದ್ದು, ಬೆಲೆ ಮುಗಿಲು ಮುಟ್ಟುವ ಸಾಧ್ಯತೆ ಇದೆ. ಹೀಗಾದಲ್ಲಿ ಸಾರ್ವಜನಿಕರ ಬದುಕು ತತ್ತರಿಸಿ ಹೋಗುವುದು ಖಚಿತ.