ಮಕ್ಕಳಿಗೆ ಕೊರೊನಾ ವೈರಸ್ ಹೆಚ್ಚಾಗಿ ಕಾಡುವುದಿಲ್ಲವೆಂದು ಸಂಶೋಧಕರು ಈಗಾಗಲೇ ಹೇಳಿದ್ದಾರೆ. ಕೆಲವೇ ಕೆಲವು ಮಕ್ಕಳಿಗೆ ಕೊರೊನಾ ಸೋಂಕಿದೆ. ಮಗುವಿಗೆ ಕೊರೊನಾದ ತೀವ್ರ ಲಕ್ಷಣಗಳು ಕಂಡು ಬಂದರೆ ಮತ್ತು ಐಸಿಯುನಲ್ಲಿ ಚಿಕಿತ್ಸೆ ಪಡೆಯಬೇಕಾದರೆ ಅದರ ಸಾವು ತುಂಬಾ ಕಡಿಮೆ ಎಂದು ಅಧ್ಯಯನವೊಂದು ಹೇಳಿದೆ.
ದೀರ್ಘಾವಧಿಯಲ್ಲಿ ಕೊರೊನಾದಿಂದ ಬಳಲುತ್ತಿರುವ ಮಕ್ಕಳ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ಹೆಚ್ಚಿನ ಅಧ್ಯಯನಗಳು ಅಗತ್ಯವೆಂದು ಸಂಶೋಧಕರು ಹೇಳಿದ್ದಾರೆ. ಯುರೋಪಿನ 20 ದೇಶಗಳಿಂದ ಮಕ್ಕಳು ಮತ್ತು ಹದಿಹರೆಯದವರ ಬಗ್ಗೆ ಸಂಶೋಧಕರು ಮಾಹಿತಿ ಸಂಗ್ರಹಿಸಿದ್ದಾರೆ. ಕೊರೊನಾ ಸೋಂಕಿತ ಒಟ್ಟು 582 ಮಕ್ಕಳು ಮತ್ತು ಹದಿಹರೆಯದವರನ್ನು ಅಧ್ಯಯನ ಮಾಡಲಾಗಿದೆ.
ಹೆಚ್ಚಿನ ಮಕ್ಕಳಲ್ಲಿ ಕೊರೊನದ ಸೌಮ್ಯ ಲಕ್ಷಣಗಳಿವೆ. ಮಕ್ಕಳಲ್ಲಿ ಸಾವಿನ ಪ್ರಮಾಣ ಅತಿ ಕಡಿಮೆ. ನವಜಾತ ಶಿಶು ಅಥವಾ ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿದ್ದ ಮಗುವನ್ನು ಐಸಿಯುಗೆ ದಾಖಲಿಸುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನ ಹೇಳಿದೆ.