ಕೊರೊನಾ ಮಹಾಮಾರಿಯಿಂದಾಗಿ ಇಡೀ ದೇಶವೇ ನಲುಗಿ ಹೋಗಿದೆ. ಹೆಮ್ಮಾರಿಯ ಕಾಟಕ್ಕೆ ಜನ ಬೇಸತ್ತು ಹೋಗಿದ್ದಾರೆ. ಈ ರೋಗಕ್ಕೆ ಯಾವಾಗಪ್ಪ ಮದ್ದು ಸಿಗುತ್ತೆ ಅಂತಾ ಜನ ಕಾಯ್ತಾ ಇದ್ದಾರೆ. ಇದರ ನಡುವೆ ಅನೇಕ ದೇಶಗಳು ಲಸಿಕೆ ಕಂಡು ಹಿಡಿಯುವಲ್ಲಿ ನಿರತವಾಗಿವೆ. ಈಗಾಗಲೇ ಪ್ರಯೋಗಗಳು ಪ್ರಾರಂಭವಾಗಿವೆ. ಜೊತೆಗೆ ಮೊದಲನೇ ಹಂತದಲ್ಲಿ ಯಶಸ್ವಿ ಕೂಡ ಆಗಿವೆ.
ಲಸಿಕೆ ವಿಚಾರವಾಗಿ ಇದೀಗ ಮತ್ತೊಂದು ಸಮಾಧಾನಕರ ಸಂಗತಿ ಹೊರ ಬಿದ್ದಿದೆ. ಪ್ಲಾಸ್ಮಿಡ್ ಡಿಎನ್‌ಎ ಲಸಿಕೆ ಜೈಕೋವ್-ಡಿಯ ಮೊದಲ ಹಂತದ ಪ್ರಯೋಗ ಯಶಸ್ವಿಯಾಗಿದೆ. ಇದೀಗ ನಾಳೆಯಿಂದ ಎರಡನೇ ಹಂತದ ಪ್ರಯೋಗ ನಡೆಯಲಿದೆ. ಈ ಮೂಲಕ ಲಸಿಕೆ ಸಿದ್ದತೆಗಳು ಯಶಸ್ವಿಯಾಗುತ್ತಿವೆ.
ಜುಲೈ 15 ರಂದು ಮೊದಲ ಹಂತದ ಪ್ರಯೋಗ ಪ್ರಾರಂಭವಾಗಿತ್ತು. ನಾಳೆಯಿಂದ ಎರಡನೇ ಹಂತದ ಪ್ರಯೋಗ ಪ್ರಾರಂಭವಾಗಲಿದೆ. ಈ ಮೂಲಕ ಇದೇ ವರ್ಷದಲ್ಲಿ ಲಸಿಕೆ ಸಿದ್ದವಾಗಬಹುದು ಎಂದು ಹೇಳಲಾಗುತ್ತಿದೆ. ಒಟ್ಟಾರೆ ಕೊರೊನಾ ವಿರುದ್ಧ ಹೋರಾಡಲು ಆದಷ್ಟು ಬೇಗ ಲಸಿಕೆ ಬರಲಿ.