ಕೊರೊನಾ ಭಯದಲ್ಲಿಯೇ ಜೀವನ ನಡೆಯುತ್ತಿದೆ. ಲಸಿಕೆ ಮೇಲೆ ಎಲ್ಲರ ಕಣ್ಣಿದೆ. ಲಸಿಕೆ, ಎಂದು ಭಾರತೀಯರಿಗೆ ಸಿಗಲಿದೆ ಎನ್ನುವ ಪ್ರಶ್ನೆಗೆ ಈಗ್ಲೂ ಸರಿಯಾದ ಉತ್ತರ ಸಿಕ್ಕಿಲ್ಲ. ಭಾರತದಲ್ಲಿಯೂ ಕೋವಿಡ್ ರೋಗಿಗಳ ಸಂಖ್ಯೆ 86 ಲಕ್ಷ ದಾಟಿದೆ. ಇದರ ಹೊರತಾಗಿ ಭಾರತ ಸರ್ಕಾರದ ಮುಂದೆ ಈಗ ಮತ್ತೊಂದು ಸಮಸ್ಯೆ ಎದುರಾಗಿದೆ. ದೇಶದಲ್ಲಿ ಲಸಿಕೆ ಸಂಗ್ರಹ ಸವಾಲಿನ ವಿಷ್ಯವಾಗಿದೆ.
ಕೊರೊನಾ ಲಸಿಕೆಗೆ ಶೇಖರಣೆಗಾಗಿ – 70 ° C ತಾಪಮಾನ ಬೇಕಾಗುತ್ತದೆ. ಲಸಿಕೆಯನ್ನು ಇಷ್ಟು ಕಡಿಮೆ ತಾಪಮಾನದಲ್ಲಿ ಇಡುವುದು ಭಾರತದಲ್ಲಿ ದೊಡ್ಡ ಸವಾಲಾಗಿದೆ ಎಂದು ದೆಹಲಿ ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ಹೇಳಿದ್ದಾರೆ. ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಇದು ದೊಡ್ಡ ಸವಾಲು ಎಂದವರು ಹೇಳಿದ್ದಾರೆ. ಹಳ್ಳಿಗಳಲ್ಲಿ ಇಂತಹ ಶೀತ ವಾತಾವರಣವನ್ನು ಸಿದ್ಧಪಡಿಸುವುದು ಕಷ್ಟವಾಗಿದೆ.
ಭಾರತ ಸರ್ಕಾರ ಲಸಿಕೆ ಸಂಗ್ರಹಕ್ಕೆ ವ್ಯವಸ್ಥೆಗಳ ಸಿದ್ಧತೆ ಶುರು ಮಾಡಿದೆ. ಆದ್ರೆ ಸಾಗಣೆ ಕೂಡ ಸವಾಲಿನ ವಿಷ್ಯವಾಗಿದ್ದು, ಇದಕ್ಕೆ ಸರ್ಕಾರ ಏನು ಮಾಡಿದೆ ಎಂದು ಈಗಾಗಲೇ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.