ಕೊರೊನಾ ಲಸಿಕೆ ಅಭಿಯಾನದ ಮೂರನೇ ಹಂತ ಮೇ 1ರಿಂದ ಶುರುವಾಗಲಿದೆ. ಲಸಿಕೆ ಪಡೆಯಲು ನೋಂದಣಿ ಪ್ರಕ್ರಿಯೆ ಶುರುವಾಗಿದೆ. 18 ವರ್ಷ ಮೇಲ್ಪಟ್ಟ ವ್ಯಕ್ತಿಗಳಿಗೆ ಮೇ 1ರಿಂದ ಲಸಿಕೆ ಸಿಗಲಿದೆ. ಭಾರತದ ಲಸಿಕೆ, ಕೊರೊನಾ ಮೇಲೆ ಹೆಚ್ಚು ಪರಿಣಾಮ ಬೀರ್ತಿದೆ.
ಭಾರತದ ಕೊವಾಕ್ಸಿನ್, ಕೊರೊನಾದ ರೂಪಾಂತರಗಳ ಮೇಲೆ ಪರಿಣಾಮ ಬೀರುತ್ತಿದೆ. ಇದು ವಿಶ್ವದ ಅತ್ಯುತ್ತಮ ಲಸಿಕೆಗಳಲ್ಲಿ ಒಂದಾಗಿದೆ ಎಂದು ಅಮೆರಿಕ ಕೂಡ ಒಪ್ಪಿಕೊಂಡಿದೆ. ಅಮೆರಿಕದ ಮುಖ್ಯ ವೈದ್ಯಕೀಯ ಸಲಹೆಗಾರ ಡಾ. ಆಂಥೋನಿ ಫೌಚಿ ಇದನ್ನು ಒಪ್ಪಿಕೊಂಡಿದ್ದಾರೆ. ಲಸಿಕೆಯ ಎರಡನೇ ಡೋಸ್ ಪಡೆದ ನಂತ್ರ ಸೌಮ್ಯ ನೋವು, ಶೀತ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇದು ಒಳ್ಳೆಯ ಬೆಳವಣಿಗೆಯಾಗಿದ್ದು, ನಿಮ್ಮ ರೋಗ ನಿರೋಧಕ ಶಕ್ತಿ ವೇಗವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರ್ಥವೆಂದು ಆಂಥೋನಿ ಹೇಳಿದ್ದಾರೆ.
ಲಸಿಕೆಯ ಹಾಕಿದ ಜಾಗದಲ್ಲಿ ನೋವು, ಆಯಾಸ, ತಲೆನೋವು, ಜ್ವರ ಅಥವಾ ವಾಂತಿ ರೋಗಲಕ್ಷಣಗಳು ಕಾಣಿಸಿದ್ರೆ ಲಸಿಕೆ ತನ್ನ ಕೆಲಸವನ್ನು ಮಾಡುತ್ತಿದೆ ಎಂದರ್ಥ. ಇದ್ರಿಂದ ಭಯಪಡುವ ಅಗತ್ಯವಿಲ್ಲವೆಂದು ಅವರು ಹೇಳಿದ್ದಾರೆ. ಲಸಿಕೆ ಅಡ್ಡ ಪರಿಣಾಮ ಕೇವಲ ಒಂದೆರಡು ದಿನವಿರುತ್ತದೆ. ಇದಕ್ಕೆ ವಿಶ್ರಾಂತಿ ಮದ್ದು. ದ್ರವ ಆಹಾರ ಸೇವನೆ ಮಾಡಬೇಕು. ಲಸಿಕೆ ಪಡೆದ ಸ್ಥಳದಲ್ಲಿ ಊತ ಕಾಣಿಸಿಕೊಂಡರೆ ಐಸ್ ನಿಂದ ಮಸಾಜ್ ಮಾಡಿ. ಹಾಗೆ ನಿದ್ರೆ ಮಾಡುವ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವನೆ ಮಾಡಬೇಕು. ಹಾಗೆ ವೈದ್ಯರ ಸಲಹೆ ಮೇರೆಗೆ ಹಣ್ಣಿನ ಸೇವನೆ ಮಾಡಬೇಕು.